HomeKarnatakaಪತ್ನಿ ಕಿರಿಕಿರಿಯಿಂದ ಪಾರಾಗಲು 26 ಲಕ್ಷ ರೂ. ತೆಗೆದುಕೊಂಡು ಹೊರಟು ಸಂಕಷ್ಟಕ್ಕೆ ಸಿಲುಕಿದ ಪತಿ...!

ಪತ್ನಿ ಕಿರಿಕಿರಿಯಿಂದ ಪಾರಾಗಲು 26 ಲಕ್ಷ ರೂ. ತೆಗೆದುಕೊಂಡು ಹೊರಟು ಸಂಕಷ್ಟಕ್ಕೆ ಸಿಲುಕಿದ ಪತಿ…!

ತನ್ನ ಪತ್ನಿ ಕಿರಿಕಿರಿಯಿಂದ ಬೇಸತ್ತು ಹೋಗಿದ್ದ ಮಹಾರಾಷ್ಟ್ರದ ಮುಂಬೈ ಮೂಲದ ವ್ಯಕ್ತಿಯೊಬ್ಬ ಇದರಿಂದ ಪಾರಾಗಲು ನೆಮ್ಮದಿ ಅರಸಿ 26 ಲಕ್ಷ ರೂಪಾಯಿ ತೆಗೆದುಕೊಂಡು ಗೋವಾಗೆ ಹೊರಟಿದ್ದು, ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾನೆ.

ಹೌದು, ಮುಂಬೈನಲ್ಲಿ ಗುತ್ತಿಗೆದಾರನಾಗಿರುವ ಈ ವ್ಯಕ್ತಿ ಶನಿವಾರದಂದು 26 ಲಕ್ಷ ರೂಪಾಯಿ ನಗದು ತೆಗೆದುಕೊಂಡು ಕಾರಿನಲ್ಲಿ ಗೋವಾದತ್ತ ಹೊರಟಿದ್ದಾನೆ.

ಈತ ಮಾರ್ಗ ತಿಳಿದುಕೊಳ್ಳಲು ಕಾರಿನಲ್ಲಿ ಗೂಗಲ್ ಮ್ಯಾಪ್ ಹಾಕಿದ್ದು, ಅದು ಆತನನ್ನು ಬೆಳಗಾವಿ ನಗರದ ಕರ್ನಾಟಕ ಚೌಕ್ ಬಳಿಯ ಚೆಕ್ ಪೋಸ್ಟ್ ದಾರಿಯಲ್ಲಿ ಕರೆದುಕೊಂಡು ಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿರುವ ಕಾರಣ ಕಟ್ಟುನಿಟ್ಟಾಗಿ ತಪಾಸಣೆ ಕೈಗೊಂಡಿರುವ ಪೊಲೀಸರು, ಕಾರು ತಡೆದು ನಿಲ್ಲಿಸಿ ಪರಿಶೀಲಿಸಿದ ವೇಳೆ ದಾಖಲೆ ಇಲ್ಲದ 26 ಲಕ್ಷ ರೂಪಾಯಿ ಪತ್ತೆಯಾಗಿದೆ. ಇದನ್ನು ಈಗ ಪೊಲೀಸರು ವಶಪಡಿಸಿಕೊಂಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular