alex Certify ತನ್ನದೇ ಮದುವೆಯಲ್ಲಿ ʼವೆಡ್ಡಿಂಗ್‌ ಫೋಟೋಗ್ರಾಫರ್‌ʼ ಮಾಡಿದ್ದೇನು ಗೊತ್ತಾ ? ನಗು ತರಿಸುತ್ತೆ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತನ್ನದೇ ಮದುವೆಯಲ್ಲಿ ʼವೆಡ್ಡಿಂಗ್‌ ಫೋಟೋಗ್ರಾಫರ್‌ʼ ಮಾಡಿದ್ದೇನು ಗೊತ್ತಾ ? ನಗು ತರಿಸುತ್ತೆ ವಿಡಿಯೋ

ತಮ್ಮ ಮದುವೆ ಸಂದರ್ಭದ ಕ್ಷಣಗಳನ್ನು ಸ್ಮರಣೀಯವಾಗಿಸಲು ಜನರು ಅತ್ಯುತ್ತಮ ಫೋಟೋಗ್ರಾಫರ್‌ಗಳನ್ನು ಭೇಟಿಯಾಗುತ್ತಾರೆ. ಆದರೆ ನೀವು ಮದುವೆ ಛಾಯಾಗ್ರಾಹಕನನ್ನೇ ಮದುವೆಯಾದರೆ ಹೇಗೆ ?

ಛಾಯಾಗ್ರಾಹಕ ಆಯನ್ ಸೇನ್ ತಮ್ಮ ಪ್ರಿಯತಮೆ ಪ್ರಿಯಾರನ್ನು ಮದುವೆಯಾದ ವೇಳೆ ಇದೇ ಆಗಿದ್ದು. ತಮ್ಮ ಲೇಡಿಲವ್‌ನ ಚಿತ್ರಗಳನ್ನು ಭಿನ್ನವಾದ ಕೋನಗಳಲ್ಲಿ ಸೆರೆ ಹಿಡಿಯಲು ಮುಂದಾಗಿದ್ದಾರೆ ಆಯನ್.

ಆಯನ್‌ರ ಈ ಸಿರಿಯನ್ನು ಅವರ ಮದುವೆಗೆ ಬಂದಿದ್ದ ಅತಿಥಿಯೊಬ್ಬರು ವಿಡಿಯೋ ರೆಕಾರ್ಡ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿದ್ದಾರೆ. ತನ್ನದೇ ಮದುವೆಯ ವೇಳೆಯಲ್ಲೂ ತನ್ನ ಕೆಲಸದ ಮೇಲಿನ ಬದ್ಧತೆಯನ್ನು ಕಂಡ ಅತಿಥಿಗಳು ಈ ಬಗ್ಗೆ ಮೆಚ್ಚಿ ಮಾತನಾಡುವುದನ್ನು ಸಹ ವಿಡಿಯೋದಲ್ಲಿ ಕೇಳಬಹುದಾಗಿದೆ.

“ಛಾಯಾಗ್ರಾಹಕನನ್ನು ನೀವು ಮದುವೆಯಾದಾಗ ! ನಾವು ಇದನ್ನು ಕನಸಿನಲ್ಲಿ ಊಹಿಸಬಹುದು. ನಮ್ಮ ತಂಡದ ಛಾಯಾಗ್ರಾಹಕರೊಬ್ಬರು ಈಗ ತಾನೇ ಮದುವೆಯಾಗಿದ್ದಾರೆ. ಆಯನ್ ಹಾಗೂ ಪ್ರಿಯಾಗೆ ವಿವಾಹ ಮಹೋತ್ಸವದ ಶುಭಾಶಯಗಳು,” ಎಂದು ವಿಡಿಯೋಗೆ ಕ್ಯಾಪ್ಷನ್ ಕೊಡಲಾಗಿದೆ.

ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಆದ ಬಳಿಕ 3.3 ದಶಲಕ್ಷ ವೀಕ್ಷಣೆಗಳನ್ನು ಕಂಡಿದೆ ಈ ವಿಡಿಯೋ.

https://youtu.be/TMa5uvW7BGg

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...