HomeKarnatakaBIG NEWS: ಅಯ್ಯೋ ನಾನೇನ್ ಫೋನ್ ಮಾಡೋದು, ಅವರೇ ಹುಡುಕಿಕೊಂಡು ಬರ್ತಿದ್ದಾರೆ ಎಂದ ಡಿ.ಕೆ.ಶಿವಕುಮಾರ್

BIG NEWS: ಅಯ್ಯೋ ನಾನೇನ್ ಫೋನ್ ಮಾಡೋದು, ಅವರೇ ಹುಡುಕಿಕೊಂಡು ಬರ್ತಿದ್ದಾರೆ ಎಂದ ಡಿ.ಕೆ.ಶಿವಕುಮಾರ್

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಮ್ಮ ಶಾಸಕರಿಗೆ ಫೋನ್ ಮಾಡಿ ಕರೆಯುತ್ತಿದ್ದಾರೆ ಎಂಬ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿಕೆಗೆ ಕೌಂಟರ್ ನೀಡಿರುವ ಡಿ.ಕೆ.ಶಿವಕುಮಾರ್, ಅವರಾಗಿಯೇ ನಮ್ಮ ಪಕ್ಷಕ್ಕೆ ಬರುತ್ತಿದ್ದಾರೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಅಯ್ಯೋ ನಾನೇನು ಫೋನ್ ಮಾಡೋದು ಅವರೇ ಹುಡುಕಿಕೊಂಡು ಬರ್ತಿದ್ದಾರೆ. ಯಾರೆಲ್ಲ ಕಾಂಗ್ರೆಸ್ ಗೆ ಬರ್ತಿದ್ದಾರೆ ಎಂದು ನಾನು ಈಗ ಹೇಳಲ್ಲ. ಮುಂದೆ ನಿಮಗೇ ಗೊತ್ತಾಗಲಿದೆ ಎಂದರು.

ನಮಗೆ ಎಲ್ಲಿ ಅನುಕೂಲವಾಗಲಿದೆಯೋ ಅಂತಹ ಕ್ಷೇತ್ರಗಳ ಬಗ್ಗೆ ಚುನಾವಣಾ ತಂತ್ರಗಾರಿಕೆ ನಡೆಸಿದ್ದೇವೆ ಎಂದು ಹೇಳುವ ಮೂಲಕ ಆಪರೇಷನ್ ಹಸ್ತದ ಸುಳಿವು ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular