HomeAutoಕಾರಿನ ಕಿಟಕಿ ಮೇಲೆ ಕುಳಿತಿದ್ದ ಯುವಕನ ವಿಡಿಯೋ ವೈರಲ್; ಕ್ರಮಕ್ಕೆ ಮುಂದಾದ ನೋಯಿಡಾ ಪೊಲೀಸರು

ಕಾರಿನ ಕಿಟಕಿ ಮೇಲೆ ಕುಳಿತಿದ್ದ ಯುವಕನ ವಿಡಿಯೋ ವೈರಲ್; ಕ್ರಮಕ್ಕೆ ಮುಂದಾದ ನೋಯಿಡಾ ಪೊಲೀಸರು

ಕಾರಿನ ಕಿಟಕಿ ಮೇಲೆ ಕುಳಿತು ರೋಡ್ ಸ್ಟಂಟ್ ಮಾಡಿದ ಯುವಕನಿಗೆ ನೋಯಿಡಾ ಪೊಲೀಸರು ಮಾಡಿದ್ದೇನು ಗೊತ್ತಾ ?

ಚಲಿಸುತ್ತಿರುವ ಕಾರೊಂದರ ಕಿಟಕಿಯ ಮೇಲೆ ಕುಳಿತುಕೊಂಡು ಮಜಾ ತೆಗೆದುಕೊಳ್ಳುತ್ತಿರುವ ವ್ಯಕ್ತಿಯೊಬ್ಬನ ವಿಡಿಯೋ ಆನ್ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಈ ಘಟನೆಯ ವಿಡಿಯೋವನ್ನು ಬಹಳ ಮಂದಿ ಶೇರ್‌ ಮಾಡಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಟ್ವಿಟರ್‌ನಲ್ಲಿ ಉತ್ತರ ಪ್ರದೇಶ ಪೊಲೀಸರನ್ನು ಟ್ಯಾಗ್ ಮಾಡಿ ಎಂಟು ಸೆಕೆಂಡ್‌ಗಳ ಈ ವಿಡಿಯೋ ತುಣುಕನ್ನು ಶೇರ್‌ ಮಾಡಿ, ಈತನ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲು ಕೋರಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಸಂಚಾರ ಇಲಾಖೆಯ ಗಮನಕ್ಕೆ ಈ ವಿಷಯ ತಂದು ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದಾರೆ.

ಸದ್ಯ ತನಿಖೆ ನಡೆಸುತ್ತಿರುವ ಪೊಲೀಸರು, ಹೀಗೆ ಮಾಡಿದವನ ಪತ್ತೆಗೆ ಮುಂದಾಗಿದ್ದಾರೆ. ಹಿಂಬದಿಯಲ್ಲಿದ್ದ ಕಾರಿನ ಚಾಲಕ/ಸಹ-ಪ್ರಯಾಣಿಕ ಈ ವಿಡಿಯೋ ಸೆರೆ ಹಿಡಿದಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular