ರಾತ್ರೋರಾತ್ರಿ ಶ್ರೀಮಂತನಾದ ಹವ್ಯಾಸಿ ಗಣಿಗಾರಿಕೆದಾರ….!

ಆಸ್ಟ್ರೇಲಿಯಾದ ವಿಕ್ಟೋರಿಯಾ ಚಿನ್ನದ ಗಣಿಯಲ್ಲಿ ತನ್ನ ಜೀವನ್ಮಾನದ ಶೋಧವೊಂದನ್ನು ಮಾಡಿದ ವ್ಯಕ್ತಿಯೊಬ್ಬ ಭಾರೀ ಪ್ರಮಾಣದಲ್ಲಿ ಚಿನ್ನ ಹೊರ ತೆಗದಿದ್ದಾನೆ.

ಡರ‍್ರೆನ್ ಕಂಪ್ ಹೆಸರಿನ ಈತ 4.6 ಕೆಜಿಯಷ್ಟು ಚಿನ್ನಭರಿತ ಶಿಲೆಯನ್ನು ಬಗೆದಿದ್ದು, ಇದರಲ್ಲಿ ಆಸ್ಟ್ರೇಲಿಯನ್ $240,000 ಮೌಲ್ಯದ ಚಿನ್ನವಿರುವುದು ತಿಳಿದು ಬಂದಿದೆ ಎಂದು ಬಿಬಿಸಿ ವರದಿ ಮಾಡಿದೆ. ಈ ಕಲ್ಲಿನಲ್ಲಿ 2.6 ಕೆಜಿಯಷ್ಟು ಚಿನ್ನ ಇದೆ.

19ನೇ ಶತಮಾನದಲ್ಲಿ ಚಿನ್ನದ ಗಣಿಗಾರಿಕೆ ನಡೆಯುತ್ತಿದ್ದ ವಿಕ್ಟೋರಿಯನ್ ಗಣಿಗಳಲ್ಲಿ ಈತ ಹೀಗೊಂದು ಶೋಧ ಮಾಡಿದ್ದಾನೆ. ತನ್ನ ಈ ಅನ್ವೇಷಣೆಯಿಂದ ತನ್ನ ಮಡದಿಗೆ ಎಲ್ಲರಿಗಿಂತ ಹೆಚ್ಚು ಖುಷಿಯಾಗಿರಲಿದೆ ಎನ್ನುತ್ತಾರೆ ಡೆರ‍್ರೆನ್ ಕಂಪ್.

ಸ್ವಾಭಾವಿಕ ಸಂಪನ್ಮೂಲಗಳಿಂದ ಶ್ರೀಮಂತವಾಗಿರುವ ಆಸ್ಟ್ರೇಲಿಯಾದಲ್ಲಿ ಜಗತ್ತಿನ ಅತಿ ದೊಡ್ಡ ಚಿನ್ನದ ನಿಕ್ಷೇಪಗಳಿದ್ದು, ಜಗತ್ತಿನ ಅತಿ ದೊಡ್ಡ ನಗ್ಗೆಟ್‌ಗಳು ಇಲ್ಲಿ ಪತ್ತೆಯಾಗುತ್ತವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read