HomeAutoಭೀಕರ ಅಪಘಾತವಾದರೂ ಪವಾಡಸದೃಶ್ಯವಾಗಿ ಬದುಕುಳಿದ ಪ್ರಯಾಣಿಕರು; ಭಯಾನಕ ವಿಡಿಯೋ ವೈರಲ್

ಭೀಕರ ಅಪಘಾತವಾದರೂ ಪವಾಡಸದೃಶ್ಯವಾಗಿ ಬದುಕುಳಿದ ಪ್ರಯಾಣಿಕರು; ಭಯಾನಕ ವಿಡಿಯೋ ವೈರಲ್

ಸಾವು ಯಾವ ದಿಕ್ಕಿನಿಂದಾದರೂ, ಹೇಗಾದರೂ ಸದ್ದಿಲ್ಲದೇ ಬರುವುದರ ಹಲವಾರು ವಿಡಿಯೋಗಳು ಈಗಾಗಲೇ ಸಾಕ್ಷಿಯಾಗಿವೆ. ಅದೇ ರೀತಿ ಆಯಸ್ಸು ಗಟ್ಟಿಯಾಗಿದ್ದರೆ ಏನೇ ದೊಡ್ಡ ಅನಾಹುತವಾದರೂ ಬದುಕಿರುವ ಘಟನೆಗಳೂ ಸಾಕಷ್ಟಿವೆ. ಇದೀಗ ಅಂಥದ್ದೇ ಒಂದು ಭಯಾನಕ ವಿಡಿಯೋ ವೈರಲ್​ ಆಗಿದ್ದು, ನೆಟ್ಟಿಗರನ್ನು ಶಾಕ್​ಗೆ ತಳ್ಳಿದೆ.

ಈ ಘಟನೆ ನಡೆದಿರುವುದು ದಕ್ಷಿಣ ಕ್ಯಾಲಿಫೋರ್ನಿಯಾದ ಡಿ ಸೊಟೊ ಅವೆನ್ಯೂ ರಸ್ತೆಯಲ್ಲಿ. ಆರಂಭದ ವಿಡಿಯೋದಲ್ಲಿ ಎಲ್ಲವೂ ಚೆನ್ನಾಗಿಯೇ ಕಾಣುತ್ತದೆ. ಆದರೆ ರಸ್ತೆಯ ಮಧ್ಯೆ ಕಾರಿನ ಟೈರ್​ ಇದ್ದಕ್ಕಿದ್ದಂತೆಯೇ ಸಿಡಿದಿದೆ. ದುರದೃಷ್ಟವಶಾತ್​ ಈ ಟೈರ್​ ಸಿಡಿದು ಪಕ್ಕದಲ್ಲಿ ಹೋಗುತ್ತಿದ್ದ ಕಾರಿನ ಅಡಿ ಹೋಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ರಭಸಕ್ಕೆ ಪಕ್ಕದ ಕಾರು ಮೇಲಕ್ಕೆ ಹಾರಿದೆ. ಟೈರ್ ಕಾರಿನ ಒಳಗೆ ಹೋಗಿದ್ದರಿಂದ ಆ ರಭಸಕ್ಕೆ ಕಾರು ಮೇಲೆ ಹಾರಿದೆ. ಟೈರ್​ ಕಳೆದುಕೊಂಡ ಕಾರು ಸುಮಾರು ದೂರ ಹೋಗಿದೆ. ಈ ಘಟನೆ ನೋಡಿದರೆ ಮೇಲಕ್ಕೆ ಹಾರಿದ್ದ ಕಾರಿನಲ್ಲಿ ಇರುವವರು ಬದುಕುಳಿಯಲು ಸಾಧ್ಯವೇ ಇಲ್ಲ ಎನ್ನಬಹುದು. ಆದರೆ ಅದೃಷ್ಟವಶಾತ್​ ಯಾವುದೇ ದೊಡ್ಡ ಗಾಯಗಳಾಗಿಲ್ಲ ಎಂದು ಲಾಸ್ ಏಂಜಲೀಸ್ ಪೊಲೀಸ್ ಇಲಾಖೆ ಮಾಧ್ಯಮಗಳಿಗೆ ಮಾಹಿತಿ ನೀಡಿದೆ.

For Latest News Updates, Join Our Whatsapp Community🚩
RELATED ARTICLES

Most Popular