HomeEntertainmentಶೀಘ್ರದಲ್ಲೇ ಪರಿಣಿತಿ ಚೋಪ್ರಾ‌ - ರಾಘವ್ ಚಡ್ಡಾ ಮದುವೆ ? ಫ್ಯಾಷನ್ ಡಿಸೈನರ್ ಭೇಟಿಯಾದ ನಟಿ

ಶೀಘ್ರದಲ್ಲೇ ಪರಿಣಿತಿ ಚೋಪ್ರಾ‌ – ರಾಘವ್ ಚಡ್ಡಾ ಮದುವೆ ? ಫ್ಯಾಷನ್ ಡಿಸೈನರ್ ಭೇಟಿಯಾದ ನಟಿ

ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮತ್ತು ರಾಜಕಾರಣಿ ರಾಘವ್ ಚಡ್ಡಾ ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರಾ ? ಹೀಗೊಂದು ಗುಸುಗುಸು ಬಾಲಿವುಡ್ ಅಂಗಳ ಸೇರಿದಂತೆ ರಾಜಕಾರಣರಂಗದಲ್ಲಿ ಇತ್ತೀಚೆಗೆ ಹೆಚ್ಚು ಸುದ್ದಿಯಾಗ್ತಿದೆ.

ಇತ್ತೀಚಿಗೆ ಇಬ್ಬರೂ ಒಟ್ಟಿಗೆ ಹೋಟೆಲ್ ನಲ್ಲಿ ಕಾಣಿಸಿಕೊಂಡ ಬಳಿಕ ಇಬ್ಬರು ಶೀಘ್ರವೇ ಮದುವೆಯಾಗಲಿದ್ದಾರೆ ಎಂಬ ಸುದ್ದಿಗೆ ಮತ್ತೊಂದು ಪುಷ್ಟಿ ಸಿಕ್ಕಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಟಿ ಪರಿಣಿತಿ ಚೋಪ್ರಾ ಭಾನುವಾರ ರಾತ್ರಿ ಏಸ್ ಡಿಸೈನರ್ ಮನೀಶ್ ಮಲ್ಹೋತ್ರಾ ಅವರ ನಿವಾಸಕ್ಕೆ ಭೇಟಿ ನೀಡಿದ್ದು ಭಾರೀ ಕುತೂಹಲ ಮೂಡಿಸಿದೆ.

ರಾಘವ್ ಚಡ್ಡಾ ಮತ್ತು ಪರಿಣಿತಿ ಚೋಪ್ರಾ ಶೀಘ್ರವೇ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದು ಇದಕ್ಕಾಗಿ ನಟಿ ಮನೀಶ್ ಮಲ್ಹೋತ್ರಾ ಅವರ ಮನೆಗೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ.

ಪರಿಣಿತಿ ಮತ್ತು ರಾಘವ್ ಅವರ ಕುಟುಂಬಗಳು ಇಬ್ಬರ ಮದುವೆ ಕಾರ್ಯಗಳಲ್ಲಿ ತೊಡಗಿಸಿಕೊಂಡಿವೆ ಎಂಬ ಮಾತುಗಳು ಸಹ ಕೇಳಿಬರ್ತಿವೆ.

For Latest News Updates, Join Our Whatsapp Community🚩
RELATED ARTICLES

Most Popular