HomeInternationalವಿಮಾನದಲ್ಲಿ ಮಹಿಳಾ ಪ್ರಯಾಣಿಕರ ಅಶಿಸ್ತಿನ ವರ್ತನೆ; ಸಹಪ್ರಯಾಣಿಕರಿಗೆ ಅಶ್ಲೀಲ ಪದಗಳಿಂದ ನಿಂದನೆ

ವಿಮಾನದಲ್ಲಿ ಮಹಿಳಾ ಪ್ರಯಾಣಿಕರ ಅಶಿಸ್ತಿನ ವರ್ತನೆ; ಸಹಪ್ರಯಾಣಿಕರಿಗೆ ಅಶ್ಲೀಲ ಪದಗಳಿಂದ ನಿಂದನೆ

ಫ್ರಾಂಟಿಯರ್ ಏರ್‌ಲೈನ್ಸ್ ವಿಮಾನವು ಮಿಯಾಮಿಯಿಂದ ಫಿಲಡೆಲ್ಫಿಯಾಕ್ಕೆ ತೆರಳುತ್ತಿದ್ದಾಗ ಪ್ರಯಾಣಿಕರೊಬ್ಬರು ಅಶಿಸ್ತಿನಿಂದ ವರ್ತಿಸಿರೋ ಮತ್ತೊಂದು ಪ್ರಕರಣ ನಡೆದಿದೆ. ವಿಮಾನದಲ್ಲಿದ್ದ ಮಹಿಳಾ ಪ್ರಯಾಣಿಕರೊಬ್ಬರು ಸಹ ಪ್ರಯಾಣಿಕರ ಮೇಲೆ ಹಲ್ಲೆ ನಡೆಸುವುದಾಗಿ ಬೆದರಿಕೆ ಹಾಕಿದಾಗ ಈ ಘಟನೆ ಸಂಭವಿಸಿದೆ.

ಮಹಿಳೆಯ ಅಶಿಸ್ತನ್ನು ವಿರೋಧಿಸಿದ ಪೊಲೀಸರಲ್ಲಿ ಒಬ್ಬರನ್ನು ಆಕೆ ಕಚ್ಚಲು ಪ್ರಯತ್ನಿಸಿದಳು. ಆಕೆಯನ್ನು ಟೆಕ್ಸಾಸ್‌ನ ಕಿಲೀನ್‌ನ 24 ವರ್ಷದ ಸಿಮೋನ್ ಬ್ರೈನಾ ಎಂದು ಗುರುತಿಸಲಾಗಿದೆ. ವಿಮಾನವು ಮಿಯಾಮಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿದ್ದಾಗ ಈ ಘಟನೆ ಸಂಭವಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಡೀ ಘಟನೆಯ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಮಹಿಳೆ ತನ್ನ ಸಹ ಪ್ರಯಾಣಿಕರಿಗೆ ಅಶ್ಲೀಲ ಮಾತುಗಳಿದ ನಿಂದಿಸಿರುವುದನ್ನ ಕೇಳಬಹುದು.

ಪರಿಸ್ಥಿತಿ ಉಲ್ಬಣಗೊಂಡಾಗ ಆಕೆಯನ್ನು ವಿಮಾನದಿಂದ ಕೆಳಗಿಳಿಸಲು ಪೊಲೀಸರನ್ನು ಕರೆಯಲಾಯಿತು.

https://twitter.com/AZ_TeeTime/status/1639309181948923906?ref_src=twsrc%5Etfw%7Ctwcamp%5Etweetembed%7Ctwterm%5E1639309181948923906%7Ctwgr%5E6354807be119e70c4b414e730426a44a42816962%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Fzeenews-epaper-dh9946c0e104864447858bd53362c2ea6c%2Fvideoofwomanattackingpassengerspoliceonflightgoesviralarrestedwatch-newsid-n483778566

For Latest News Updates, Join Our Whatsapp Community🚩
RELATED ARTICLES

Most Popular