
ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಈಗಾಗಲೇ ಕಾಂಗ್ರೆಸ್ ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ. ವರುಣಾದಿಂದ ಟಿಕೆಟ್ ನೀಡಲಾಗಿದೆ. ನಾನು ಕೋಲಾರದಿಂದ ಸ್ಪರ್ಧಿಸುವ ಬಗ್ಗೆ ಹೇಳಿದ್ದೆ. ಹೈಕಮಾಂಡ್ ವರುಣಾದಿಂದ ಸ್ಪರ್ಧಿಸಲು ತಿಳಿಸಿತ್ತು. ನಾನು 2 ಕ್ಷೇತ್ರಗಳಿಂದ ಸ್ಪರ್ಧೆ ಮಾಡುವುದಾಗಿ ಹೇಳಿದ್ದೇನೆ. ಈಗಾಗಲೇ ವರುಣಾದಿಂದ ಟಿಕೆಟ್ ಸಿಕ್ಕಿದೆ. ಹೈಕಮಾಂಡ್ ಹೇಳಿದರೆ ಇನ್ನೊಂದು ಕ್ಷೇತ್ರದಲ್ಲಿಯೂ ಸ್ಪರ್ಧೆ ಮಾಡುತ್ತೇನೆ ಎಂದರು.
ಈ ವಿಚಾರದಲ್ಲಿ ನಾನು ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವುದಾಗಿ ನಾನು ವರಿಷ್ಠರಿಗೆ ಹೇಳಿದ್ದೇನೆ. ಅವರು ಹೇಳಿದರೆ ಕೋಲಾರದಿಂದಲೂ ನಿಲ್ಲುತ್ತೇನೆ ಎಂದು ತಿಳಿಸಿದರು.

