HomeInternationalಅಪರಿಚಿತರ ಜೇಬಿಗೆ ಬಿತ್ತು ಲಕ್ಷ ಲಕ್ಷ ಮೊತ್ತದ ಚೆಕ್; ಅವರ ರಿಯಾಕ್ಷನ್ ಹೇಗಿತ್ತು ಗೊತ್ತಾ ?

ಅಪರಿಚಿತರ ಜೇಬಿಗೆ ಬಿತ್ತು ಲಕ್ಷ ಲಕ್ಷ ಮೊತ್ತದ ಚೆಕ್; ಅವರ ರಿಯಾಕ್ಷನ್ ಹೇಗಿತ್ತು ಗೊತ್ತಾ ?

ನಿಮ್ಮ ಜೇಬಿನಲ್ಲಿ ಇದ್ದಕ್ಕಿದ್ದಂತೆ ಲಕ್ಷ ಲಕ್ಷ ಹಣದ ಚೆಕ್ ಕಂಡ್ರೆ ಏನ್ಮಾಡ್ತೀರಾ ? ವಾಸ್ತವವಾಗಿ ಯಾರಿಗೂ ಕಾಣದಂತೆ ಗುಟ್ಟಾಗಿ ಇಟ್ಟಿಕೊಳ್ತೀವಿ ಅನ್ನೋರೇ ಹೆಚ್ಚು.

ಆದ್ರೆ ಲಕ್ಷ ಲಕ್ಷ ರೂಪಾಯಿ ಮೊತ್ತದ ಚೆಕ್ ಕಂಡ್ರೂ ಅವರು ನಮಗೆ ಹಣ ಬೇಡ ಅಂದಿದ್ದಾರೆ. ಪುರುಷರ ಗುಂಪೊಂದು ಅಪರಿಚಿತರ ಜೇಬಿಗೆ $100,000 (ಅಂದಾಜು ರೂ. 82 ಲಕ್ಷ) ಮೌಲ್ಯದ ಚೆಕ್‌ಗಳನ್ನು ಅವರ ಜೇಬಿಗೆ ಇಟ್ಟು ಅವರ ಪ್ರತಿಕ್ರಿಯೆಯನ್ನು ಚಿತ್ರೀಕರಿಸಿದೆ.

ಈ ವಿಡಿಯೋವನ್ನ ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿದ್ದು ನೆಟ್ಟಿಗರ ಗಮನ ಸೆಳೆದಿದೆ. ವ್ಯಾನ್‌ನಲ್ಲಿ ಹೊರಟ ಪುರುಷರ ಗುಂಪು ಅಂಗಡಿಯೊಂದನ್ನ ತಲುಪಿ ಅಲ್ಲಿದ್ದ ಓರ್ವ ವ್ಯಕ್ತಿಯ ಜೇಬಿಗೆ $10,000 ಚೆಕ್ ನ ಅವರ ಜೇಬಲ್ಲಿಟ್ಟು ಗಮನ ಸೆಳೆದಿದೆ. ಆದರೆ ಆ ವ್ಯಕ್ತಿ ಹಣ ಪಡೆಯಲು ನಿರಾಕರಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅವರ ಮುಂದಿನ ಪ್ರಯತ್ನದಲ್ಲಿ, ಪುರುಷರ ಗುಂಪು ಮತ್ತೊಮ್ಮೆ ಇನ್ನೊಬ್ಬ ವ್ಯಕ್ತಿಯ ಜೇಬಿಗೆ ಚೆಕ್ ಅನ್ನು ಹಾಕುತ್ತಾರೆ., ಅವರು ಈಗಾಗಲೇ ಮಿಲಿಯನೇರ್ ಎಂದು ಹೇಳಿ ಅದನ್ನು ತೆಗೆದುಕೊಳ್ಳಲು ನಿರಾಕರಿಸುತ್ತಾರೆ.

ನಂತರ ಪುರುಷರು ತನ್ನ ಕುಟುಂಬದೊಂದಿಗೆ ಅಂಗಡಿಯಲ್ಲಿದ್ದ ಒಬ್ಬ ವ್ಯಕ್ತಿಗೆ ಚೆಕ್ ನೀಡಿದಾಗ ಆತ ಸಂತೋಷದಿಂದ ಹಣವನ್ನು ಸ್ವೀಕರಿಸುತ್ತಾರೆ. ಹೀಗೆ ಪುರುಷರ ತಂಡ ತಮ್ಮ ಕಾರ್ಯವನ್ನು ಮುಂದುವರೆಸುತ್ತಾ ಹೋಗುತ್ತೆ.

For Latest News Updates, Join Our Whatsapp Community🚩
RELATED ARTICLES

Most Popular