HomeCrimeಖ್ಯಾತ ಗಾಯಕ ಸೋನು ನಿಗಮ್ ತಂದೆ ಮನೆಯಿಂದ 72 ಲಕ್ಷ ರೂ. ನಗದು ಕಳವು...!

ಖ್ಯಾತ ಗಾಯಕ ಸೋನು ನಿಗಮ್ ತಂದೆ ಮನೆಯಿಂದ 72 ಲಕ್ಷ ರೂ. ನಗದು ಕಳವು…!

ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ ಅವರ ತಂದೆ ಮನೆಯಿಂದ ಬರೋಬ್ಬರಿ 72 ಲಕ್ಷ ರೂಪಾಯಿ ನಗದು ಕಳುವಾಗಿದ್ದು, ಅವರ ಮಾಜಿ ಚಾಲಕನೇ ಈ ಕೃತ್ಯವೆಸಗಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಸೋನು ನಿಗಮ್ ಅವರ ಸಹೋದರಿ ಮುಂಬೈನ ಓಶೀವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಘಟನೆಯ ವಿವರ: ಓಶೀವಾರದ ವಿಂಡ್ಸರ್ ಗ್ರಾಂಡ್ ನಲ್ಲಿ ವಾಸವಾಗಿರುವ ಸೋನು ನಿಗಮ್ ಅವರ ತಂದೆ ಅಗಾಕುಮಾರ್ ನಿಗಮ್ ಮಾರ್ಚ್ 19 ರಂದು ತಮ್ಮ ಕಿರಿಯ ಪುತ್ರಿ ನಿಖಿತಾ ಅವರ ನಿವಾಸಕ್ಕೆ ತೆರಳಿದ್ದು, ಮನೆಗೆ ವಾಪಸ್ ಬಂದಾಗ ಡಿಜಿಟಲ್ ಲಾಕರ್ ನಲ್ಲಿದ್ದ 40 ಲಕ್ಷ ರೂಪಾಯಿ ನಾಪತ್ತೆಯಾಗಿರುವುದನ್ನು ಗಮನಿಸಿದ್ದಾರೆ. ಕೂಡಲೇ ಈ ವಿಷಯವನ್ನು ತಮ್ಮ ಪುತ್ರಿಗೆ ತಿಳಿಸಿದ್ದು, ಅವರು ಕೂಡ ಪರಿಶೀಲಿಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾರ್ಚ್ 20ರಂದು ವೀಸಾ ಸಂಬಂಧಿ ಕೆಲಸಗಳಿಗಾಗಿ ಆಗಾಕುಮಾರ್ ನಿಗಮ್, ಸೋನು ನಿಗಮ್ ಅವರ ನಿವಾಸಕ್ಕೆ ತೆರಳಿದ್ದು ವಾಪಸ್ ಬಂದಾಗ ಮತ್ತೆ 32 ಲಕ್ಷ ರೂಪಾಯಿ ಕಾಣೆಯಾಗಿರುವುದು ಕಂಡುಬಂದಿತ್ತು. ಎರಡು ದಿನಗಳ ಅವಧಿಯಲ್ಲಿ ಒಟ್ಟು 72 ಲಕ್ಷ ರೂಪಾಯಿ ಕಳುವಾಗಿರುವುದು ಗೊತ್ತಾಗಿತ್ತು.

ಅಪಾರ್ಟ್ಮೆಂಟ್ ಸಿಸಿ ಟಿವಿ ಪರಿಶೀಲಿಸಿದ ವೇಳೆ ತಮ್ಮಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ರೆಹಾನ್ ಬ್ಯಾಗ್ ಜೊತೆ ಹೋಗುತ್ತಿರುವುದು ಕಂಡುಬಂದಿತ್ತು. ಎಂಟು ತಿಂಗಳಿನಿಂದ ಆಗಾಕುಮಾರ್ ಅವರ ಕಾರು ಚಾಲಕನಾಗಿದ್ದ ರೆಹಾನ್ ನನ್ನು ಇತ್ತೀಚೆಗಷ್ಟೇ ಕೆಲಸದಿಂದ ತೆಗೆದು ಹಾಕಲಾಗಿತ್ತು. ಸಿಸಿ ಟಿವಿ ದೃಶ್ಯಾವಳಿ ಆಧರಿಸಿ ಇದೀಗ ಆತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular