
ಹುಬ್ಬಳ್ಳಿ: ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣದಲ್ಲಿ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್ ಅನ್ನು ಮಾರ್ಚ್ 12 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದರು. ಇದರ ಕುರಿತು ಈಗ ರೈಲ್ವೆ ಇಲಾಖೆ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದೆ.
ವಿಶ್ವ ದಾಖಲೆಯನ್ನು ಸಾಧಿಸಿದ ಹೆಮ್ಮೆ ಇದಾಗಿದೆ ಎಂದು ರೈಲ್ವೆ ಸಚಿವಾಲಯ ಹೇಳಿದೆ. ಈ ಪ್ಲಾಟ್‌ಫಾರ್ಮ್ 185 ಮೀ/1507 ಮೀ ಜಾಗವನ್ನು ಆಕ್ರಮಿಸಿಕೊಂಡಿದೆ. ಛಾಯಾಚಿತ್ರವನ್ನು ಟ್ವಿಟ್ಟರ್ ಬಳಕೆದಾರ ಸಂದೀಪ್ ಬಾಯಾರಿ ಅವರು ಹಂಚಿಕೊಂಡಿದ್ದಾರೆ, “ಹೆಮ್ಮೆಯ ಕ್ಷಣ” ಎಂದು ಶೇರ್ ಮಾಡಿದ್ದಾರೆ.
ನವೆಂಬರ್ 2019 ರಲ್ಲಿ ಪ್ರಾರಂಭವಾದ ಹುಬ್ಬಳ್ಳಿ ಮತ್ತು ಬೆಂಗಳೂರು ನಡುವಿನ ರೈಲ್ವೆ ಫ್ಲಾಟ್ಫಾರ್ಮ್ ಇದಾಗಿದೆ. ಉತ್ತರ ಪ್ರದೇಶದ ಗೋರಖ್‌ಪುರ ರೈಲು ನಿಲ್ದಾಣ (1336 ಮೀ) ಈ ಹಿಂದೆ ಅತಿ ಉದ್ದದ ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿರುವ ನಿಲ್ದಾಣಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿತ್ತು. ಕೇರಳದ ಕೊಲ್ಲಂ ಜಂಕ್ಷನ್ (1180 ಮೀ) ನಂತರದ ಸ್ಥಾನದಲ್ಲಿದೆ.
New accomplishments for #NewIndia🇮🇳! https://t.co/QejGqr77aj
— Ministry of Railways (@RailMinIndia) March 20, 2023
World’s Longest Railway Platform.
PM @narendramodi Ji will dedicate to the nation tomorrow. pic.twitter.com/aHsuPjXFbX
— Ashwini Vaishnaw (@AshwiniVaishnaw) March 11, 2023

