HomeKarnatakaBIG NEWS: ಉರಿಗೌಡ, ನಂಜೇಗೌಡ ಚರ್ಚೆ ವಿಚಾರ; ಇದು ಕಾಲ್ಪನಿಕ ಕಥೆಯಲ್ಲ; ನಿರ್ಮಲಾನಂದ ಶ್ರೀಗಳಿಗೆ ಮನವರಿಕೆ...

BIG NEWS: ಉರಿಗೌಡ, ನಂಜೇಗೌಡ ಚರ್ಚೆ ವಿಚಾರ; ಇದು ಕಾಲ್ಪನಿಕ ಕಥೆಯಲ್ಲ; ನಿರ್ಮಲಾನಂದ ಶ್ರೀಗಳಿಗೆ ಮನವರಿಕೆ ಮಾಡುತ್ತೇವೆ ಎಂದ ಸಿ.ಟಿ.ರವಿ

ತುಮಕೂರು: ಉರಿಗೌಡ, ನಂಜೇಗೌಡ ವಿಚಾರ ಪ್ರಸ್ತಾಪಿಸದಂತೆ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಸೂಚಿಸಿದ್ದರೂ ಸುಮ್ಮನಾಗದ ಬಿಜೆಪಿ ನಾಯಕ ಸಿ.ಟಿ.ರವಿ ಮತ್ತೆ ಕ್ಯಾತೆ ತೆಗೆದಿದ್ದಾರೆ.

ತುಮಕೂರಿನಲ್ಲಿ ಮಾತನಾಡಿದ ಸಿ.ಟಿ.ರವಿ, ಉರಿಗೌಡ, ನಂಜೇಗೌಡ ಕಾಲ್ಪನಿಕ ಕಥೆಯಲ್ಲ, ಅವರ ಬಗ್ಗೆ ಜವರೇಗೌಡರು ಸುವರ್ಣ ಮಂಡ್ಯ ಪುಸ್ತಕದಲ್ಲಿ ದಾಖಲಿಸಿದ್ದಾರೆ. ನಿರ್ಮಲಾನಂದನಾಥ ಶ್ರೀಗಳಿಗೆ ಮನವರಿಕೆ ಮಾಡಿಕೊಡುತ್ತೇವೆ ಎಂದು ಹೇಳಿದ್ದಾರೆ.

ನಿರ್ಮಲಾನಂದನಾಥ ಶ್ರೀಗಳ ಮಾತನ್ನು ಗೌರವಿಸುತ್ತೇವೆ. ಶ್ರೀಗಳಿಗೆ ವಾಸ್ತವವನ್ನು ಮನವರಿಕೆ ಮಾಡಿಕೊಡುತ್ತೇವೆ. ಶ್ರೀಗಳ ಬಳಿ ದಾಖಲೆಗಳನ್ನು ತೆಗೆದುಕೊಂಡು ಹೋಗುತ್ತೇವೆ. ಉರಿಗೌಡ, ನಂಜೇಗೌಡ ಹೆಸರಿಗೆ ಇಂದು ನಿನ್ನೆ ಪ್ರಾಮುಖ್ಯತೆ ಬಂದಿದ್ದಲ್ಲ. ಇದು ಕಾಲ್ಪನಿಕ ಪಾತ್ರವೂ ಅಲ್ಲ. ಅವರಿಬ್ಬರೂ ಸುಳ್ಳು ಎಂದು ಹೇಳುವವರು ಕ್ಷಮೆಯಾಚಿಸಬೇಕು ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular