HomeKarnatakaBIG NEWS: ಉರಿಗೌಡ, ನಂಜೇಗೌಡ ಚರ್ಚೆಗೆ ಕಾಂಗ್ರೆಸ್ ಕುಟುಕು; ಇಬ್ಬರ ಆಧಾರ್ ಕಾರ್ಡ್ ಬಿಡುಗಡೆ ಮಾಡಿ...

BIG NEWS: ಉರಿಗೌಡ, ನಂಜೇಗೌಡ ಚರ್ಚೆಗೆ ಕಾಂಗ್ರೆಸ್ ಕುಟುಕು; ಇಬ್ಬರ ಆಧಾರ್ ಕಾರ್ಡ್ ಬಿಡುಗಡೆ ಮಾಡಿ ಟಾಂಗ್ ಕೊಟ್ಟ ಕೈ ಪಾಳಯ

ಬೆಂಗಳೂರು: ಉರಿಗೌಡ, ನಂಜೇಗೌಡ ಚರ್ಚೆ ವಿಚಾರ ತಾರಕಕ್ಕೇರಿದ್ದು, ರಾಜ್ಯ ಕಾಂಗ್ರೆಸ್ ಉರಿಗೌಡ, ನಂಜೇಗೌಡರ ಆಧಾರ್ ಕಾರ್ಡ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ರಾಜ್ಯ ಬಿಜೆಪಿ ಸರ್ಕಾರವನ್ನು ಕುಟುಕಿದೆ.

ಉರಿಗೌಡ, ನಂಜೇಗೌಡ ಅವರ ಆಧಾರ್ ಕಾರ್ಡ್ ಸೃಷ್ಟಿಸಿ ಕಾಂಗ್ರೆಸ್ ವ್ಯಂಗ್ಯವಾಡಿದ್ದು, ಇದು ಅನೇಕ ಸಂಶೋಧನೆಗಳ ಬಳಿಕ ಸಿಕ್ಕ ಮಾಹಿತಿ ಎಂದು ಟಾಂಗ್ ನೀಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೆಸರು: ಉರಿಗೌಡ
ತಾಯಿ: ಅಶ್ವತ್ಥನಾರಾಯಣ
ತಂದೆ: ಸಿ.ಟಿ.ರವಿ
ಹುಟ್ಟಿದ್ದು: ಚುನಾವಣೆ ಹತ್ತಿರ ಬಂದಾಗ
ಜನ್ಮಸ್ಥಳ: ಬಿಜೆಪಿ ಕಚೇರಿ, ಮಲ್ಲೇಶ್ವರಂ ಬೆಂಗಳೂರು
ಆಧಾರ್ ಸಂಖ್ಯೆ: 420 420 420 420

ಹೆಸರು: ನಂಜೇಗೌಡ
ತಾಯಿ: ಅಶ್ವತ್ಥನಾರಾಯಣ
ತಂದೆ: ಸಿ.ಟಿ.ರವಿ
ಹುಟ್ಟಿದ್ದು: ಚುನಾವಣೆ ಹತ್ತಿರ ಬಂದಾಗ
ಜನ್ಮಸ್ಥಳ: ಬಿಜೆಪಿ ಕಚೇರಿ, ಮಲ್ಲೇಶ್ವರಂ ಬೆಂಗಳೂರು
ಆಧಾರ್ ಸಂಖ್ಯೆ: 420 420 420 420
ಎಂದು ಕಾಂಗ್ರೆಸ್, ಆಧಾರ್ ಕಾರ್ಡ್ ಪೋಸ್ಟ್ ಮಾಡುವ ಮೂಲಕ ರಾಜ್ಯ ಬಿಜೆಪಿ ಪಾಳಯವನ್ನು ತರಾಟೆಗೆ ತೆಗೆದುಕೊಂಡಿದೆ.

For Latest News Updates, Join Our Whatsapp Community🚩
RELATED ARTICLES

Most Popular