HomeKarnatakaBIG NEWS: ನನಗೆ ಉರಿಗೌಡ, ನಂಜೇಗೌಡರ ಬಗ್ಗೆ ಗೊತ್ತಿಲ್ಲ, ದೇವೇಗೌಡರು, ರಂಗೇಗೌಡರ ಬಗ್ಗೆ ಗೊತ್ತು ಎಂದು...

BIG NEWS: ನನಗೆ ಉರಿಗೌಡ, ನಂಜೇಗೌಡರ ಬಗ್ಗೆ ಗೊತ್ತಿಲ್ಲ, ದೇವೇಗೌಡರು, ರಂಗೇಗೌಡರ ಬಗ್ಗೆ ಗೊತ್ತು ಎಂದು ಟಾಂಗ್ ನೀಡಿದ ಸಚಿವ ಸುಧಾಕರ್

ಚಿಕ್ಕಬಳ್ಳಾಪುರ: ಉರಿಗೌಡ, ನಂಜೇಗೌಡ ವಿಚಾರ ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ದಿನದಿಂದ ದಿನಕ್ಕೆ ತಿರುವು ಪಡೆದುಕೊಳ್ಳುತ್ತಿದೆ.

ಬಿಜೆಪಿ ಆರಂಭಿಸಿರುವ ಉರಿಗೌಡ, ನಂಜೇಗೌಡ ಚರ್ಚೆ ವಿಚಾರವಾಗಿ ಮಾತನಾಡಿರುವ ಸಚಿವ ಡಾ. ಸುಧಾಕರ್, ನನಗೆ ಉರಿಗೌಡ, ನಂಜೇಗೌಡ ಗೊತ್ತಿಲ್ಲ, ದೇವೇಗೌಡ, ರಂಗೇಗೌಡ ಗೊತ್ತು ಎಂದು ಹೇಳುವ ಮೂಲಕ ಟಾಂಗ್ ನೀಡಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಡಾ. ಸುಧಾಕರ್, ನನಗೆ ಗೊತ್ತಿರುವವರ ಬಗ್ಗೆ ಮಾತ್ರ ನಾನು ಮಾತನಾಡುತ್ತೇನೆ. ಗೊತ್ತಿಲ್ಲದ ವಿಚಾರಗಳ ಬಗ್ಗೆ ನಾನು ಮಾತನಾಡಲು ಹೋಗಲ್ಲ. ಉರಿಗೌಡ, ನಂಜೇಗೌಡರ ಬಗ್ಗೆ ನನಗೆ ಗೊತ್ತಿಲ್ಲ, ಈ ಇಬ್ಬರ ವಿಚಾರವನ್ನು ದೊಡ್ಡದು ಮಾಡಬೇಕಿಲ್ಲ, ಅವರು ದೇಶಕ್ಕಾಗಿ ಹೋರಾಟ ಮಾಡಿದ್ದರೆ ಗೌರವ ಸಲ್ಲಿಸೋಣ ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular