
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಕಮಡೊಳ್ಳಿ ಗ್ರಾಮದಲ್ಲಿ ರೋಡ್ ಶೋ ನಡೆಸಿದ ಸಿಎಂ ಬಸವರಾಜ್ ಬೊಮ್ಮಾಯಿ, ಹುಟ್ಟೂರು ಕಮಡೊಳ್ಳಿಯ ಹಲವು ಮನೆಗಳಿಗೆ, ಸಂಬಂಧಿಕರ ನಿವಾಸಕ್ಕೆ ಭೇಟಿ ನೀಡಿದರು. ಇಡೀ ಕಮಡೊಳ್ಳಿ ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿತ್ತು.
ಊರ ಮಗ, ರಾಜ್ಯದ ದೊರೆಯ ಆಗಮನದಿಂದ ಸಂತಸಗೊಂಡ ಜನರು ಅದ್ದೂರಿಯಾಗಿ ಸ್ವಾಗತಿಸಿದರು. ಜನರ ಪ್ರೀತಿ, ವಿಶ್ವಾಸ, ಆದರ ಕಂಡು ಸಿಎಂ ಬೊಮ್ಮಾಯಿ ಭಾವುಕರಾಗಿ ಕಣೀರಿಟ್ಟ ಘಟನೆ ನಡೆದಿದೆ.

