HomeIndiaಕಣ್ಣು ಕಾಣದಿದ್ದರೆ ಏನಂತೆ ? ಇದೇ ಅಲ್ವಾ ʼಮಾನವೀಯತೆʼ

ಕಣ್ಣು ಕಾಣದಿದ್ದರೆ ಏನಂತೆ ? ಇದೇ ಅಲ್ವಾ ʼಮಾನವೀಯತೆʼ

ಅಂಧ ಮಹಿಳೆಯೊಬ್ಬರು ನಾಯಿಮರಿಗೆ ಬಾಟಲಿಯಿಂದ ಹಾಲು ಕುಡಿಸುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಹೃದಯ ಗೆದ್ದಿದೆ.

ಈ ವಿಡಿಯೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳಲಾಗಿದೆ, ಇನ್‌ಸ್ಪೈರ್ ನೇಚರ್ ಎಂಬ ಪುಟವು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದೆ.
ವಿಡಿಯೋದಲ್ಲಿ ದೃಷ್ಟಿಹೀನ ಮಹಿಳೆಯೊಬ್ಬರು ಪ್ರವಾಸಿ ಸ್ಥಳದ ಹೊರಗೆ ತನ್ನ ಮಡಿಲಲ್ಲಿ ಸಣ್ಣ ನಾಯಿಮರಿಯೊಂದಿಗೆ ಕುಳಿತಿರುವುದನ್ನು ಕಾಣಬಹುದು. ಅವಳು ಬಾಟಲಿಯಿಂದ ಹಾಲು ಕೊಡುತ್ತಿದ್ದಳು. ನಾಯಿಯು ಆ ಹಾಲನ್ನು ಕುಡಿಯುವುದನ್ನು ನೋಡಬಹುದು. ನಂತರ ಮಹಿಳೆ ನಾಯಿಮರಿಯ ಬಾಯಿಂದ ಹಾಲನ್ನು ಒರೆಸಿದಳು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಣ್ಣಿದ್ದೂ ಕುರುಡಾಗಿರುವ ಜನರ ನಡುವೆ ಈಕೆ ಅದ್ಭುತವಾಗಿ ಕಾಣಿಸುತ್ತಾಳೆ. ಈ ತಾಯಿ ಜನ್ಮಕ್ಕೆ ನಮೋನಮಃ ಎಂದು ಹಲವರು ಕಮೆಂಟ್​ ಹಾಕುತ್ತಿದ್ದಾರೆ. ಮಹಿಳೆಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಹೊರಗಿನ ಕಣ್ಣು ಕುರುಡಾಗಿದ್ದರೂ, ಮನಸ್ಸಿನ ಕಣ್ಣು ತೆರೆದಾಗ ಇಂಥ ಅದ್ಭುತಗಳೆಲ್ಲವೂ ಸಾಧ್ಯ ಎಂದು ಇನ್ನು ಹಲವರು ಬರೆದಿದ್ದಾರೆ.

https://www.youtube.com/watch?v=wfcm_GaLfOQ

For Latest News Updates, Join Our Whatsapp Community🚩
RELATED ARTICLES

Most Popular