HomeCrimeShocking: 10 ವರ್ಷದ ಬಾಲಕಿ ಮೇಲೆ 12 ವರ್ಷದ ಬಾಲಕರಿಬ್ಬರಿಂದ ಅತ್ಯಾಚಾರ

Shocking: 10 ವರ್ಷದ ಬಾಲಕಿ ಮೇಲೆ 12 ವರ್ಷದ ಬಾಲಕರಿಬ್ಬರಿಂದ ಅತ್ಯಾಚಾರ

ದೇಶದಲ್ಲಿ ಈಗ ಮತ್ತೊಂದು ಅತ್ಯಾಚಾರ ಬೆಳಕಿಗೆ ಬಂದಿದ್ದು. ಈ ಘಟನೆಯಿಂದಾಗಿ ದೇಶದ ಜನತೆ ಬೆಚ್ಚಿಬಿದ್ದಿದ್ದಾರೆ. 10 ವರ್ಷದ ಬಾಲಕಿಯ ಮೇಲೆ 12 ವರ್ಷದ ವರ್ಷದ ಬಾಲಕರಿಬ್ಬರು ಅತ್ಯಾಚಾರ ಎಸಗಿದ್ದಾರೆ.

ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಜುನವಾಯ್‌ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಆಟ ಆಡುತ್ತಿದ್ದ 10 ವರ್ಷದ ಬಾಲಕಿಯನ್ನ ಇಬ್ಬರು ಬಾಲಕರು ಆಟ ಆಡುವ ನೆಪಮಾಡಿ ಮೈದಾನಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಸಂತ್ರಸ್ಥೆಯನ್ನ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸದ್ಯಕ್ಕೆ ಇಬ್ಬರು ಬಾಲಕರನ್ನ ಬಾಲಾಪರಾಧಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಸಂಭಾಲ್‌ನ ಜುನವಾಯ್‌ ಪೊಲೀಸ್‌ ಠಾಣೆ ಅಧಿಕಾರಿಗಳು ಹೇಳಿದ್ದಾರೆ.

ಈ ಘಟನೆ ಎರಡು ದಿನದ ಹಿಂದೆ ನಡೆದಿದ್ದು, ಮಕ್ಕಳು ಆಟ ಆಡ್ತಾ, ಆಡ್ತಾ ಅಲ್ಲೇ ಪಕ್ಕದ ಮೈದಾನದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಯಾರೂ ಇಲ್ಲದಿರುವುದನ್ನ ನೋಡಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ.

ಈಗಾಗಲೇ ಸಂತ್ರಸ್ಥೆಯ ಕುಟುಂಬದವರು ಜುನವಾಯ್‌ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಬಾಲಕರ ವಿರುದ್ಧ ಕ್ರಮ ಕೈಗೊಂಡಿದ್ಧಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಚಕ್ರೇಶ್‌ ಮಿಶ್ರಾ ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular