HomeCrimeಹಿಂಸೆ ತಾಳದೇ ಬಿಟ್ಟು ಹೋದ ಪತ್ನಿ: ಅತ್ತೆಯ ಮೂಗು ಕತ್ತರಿಸಿದ ಅಳಿಯ....!

ಹಿಂಸೆ ತಾಳದೇ ಬಿಟ್ಟು ಹೋದ ಪತ್ನಿ: ಅತ್ತೆಯ ಮೂಗು ಕತ್ತರಿಸಿದ ಅಳಿಯ….!

ಮೊರೆನಾ: ಪತ್ನಿ ತನ್ನನ್ನು ಬಿಟ್ಟು ಹೋದಳು ಎಂಬ ಸಿಟ್ಟಿನಿಂದ ಕುಪಿತಗೊಂಡ ವ್ಯಕ್ತಿಯೊಬ್ಬ ತನ್ನ ಮಾವನಿಗೆ ಥಳಿಸಿದ್ದಲ್ಲದೆ, ಅತ್ತೆಯ ಮೂಗನ್ನೂ ಕತ್ತರಿಸಿರುವ ಘಟನೆ ಮಧ್ಯಪ್ರದೇಶದ ಮೊರೆನಾದಲ್ಲಿ ನಡೆದಿದೆ. ಕೊತ್ವಾಲಿ ಪೊಲೀಸರು ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೊರೆನಾದ ಚಾಂದ್‌ಪುರ ಗ್ರಾಮದ ನಿವಾಸಿ 55 ವರ್ಷದ ರಾಮ್ ವಿಲಾಸಿ ತನ್ನ ಪತಿ ರಾಮೇತ್ ಬಾಘೆಲ್ ಮತ್ತು ಮಗನೊಂದಿಗೆ ಮಗಳನ್ನು ಭೇಟಿಯಾಗಲು ತೆರಳಿದ್ದರು. ಈ ಮಧ್ಯೆ, ಮಗಳನ್ನು ಭೇಟಿಯಾಗಿ ಬೈಕ್‌ನಲ್ಲಿ ಹಿಂತಿರುಗುತ್ತಿದ್ದಾಗ ರಾಮ್ ವಿಲಾಸಿ ಅವರ ಅಳಿಯ ರಾಜು ಬಘೇಲ್ ಮತ್ತು ಇಬ್ಬರು ಸಂಬಂಧಿಕರು ಅವರ ರಸ್ತೆಯನ್ನು ತಡೆದು ಅವರೊಂದಿಗೆ ಜಗಳವಾಡಿದರು. ರಾಮ್ ವಿಯಾಲ್ಸಿ ಅದನ್ನು ವಿರೋಧಿಸಿದಾಗ, ಅವರ ಅಳಿಯ ರಾಜು ಬಘೇಲ್ ಅವರ ಮೂಗನ್ನು ಹಲ್ಲುಗಳಿಂದ ಕತ್ತರಿಸಿ, ಅವರ ಪತಿ ರಾಮೇತ್ ಬಾಘೇಲ್ ಅವರನ್ನು ಥಳಿಸಿದ್ದಾರೆ.

ಅಳಿಯ ರಾಜು ಬಘೇಲ್ ತನ್ನ ಪತ್ನಿ ಶ್ಯಾಮ್ ಶುಂದರಿಗೆ ಥಳಿಸುತ್ತಿದ್ದ. ಇದರಿಂದ ಬೇಸತ ಶ್ಯಾಮ್ ಶುಂದರಿ ಪೊಲೀಸರಿಗೆ ದೂರು ನೀಡಿ ಬೇರ್ಪಟ್ಟರು, ಇದರಿಂದ ಕುಪಿತಗೊಂಡ ರಾಜು ಬಾಘೇಲ್ ಈ ರೀತಿ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular