ಒಂಬತ್ತು ವರ್ಷಗಳ ಕಾಲ ತನ್ನ ದೇಹದಲ್ಲಿ ಕ್ಯಾಲ್ಸಿಫೈಡ್ ಭ್ರೂಣವನ್ನು ಹೊತ್ತಿದ್ದ ಮಹಿಳೆ ಅಪೌಷ್ಠಿಕತೆಯಿಂದ ಮೃತಪಟ್ಟಿರೋ ಘಟನೆ ಅಮೆರಿಕಾದಲ್ಲಿ ನಡೆದಿದೆ.
ಕಾಂಗೋಲೀಸ್ ನಿರಾಶ್ರಿತ ಮಹಿಳೆಯ ಕರುಳುಗಳು ನಿರ್ಬಂಧಿಸಲ್ಪಟ್ಟಿದ್ದರಿಂದ ತೀವ್ರ ಅಪೌಷ್ಟಿಕತೆಯ ನಂತರ ಅವರು ಮರಣ ಹೊಂದಿದ್ದಾರೆ.
ಬಹಳ ದಿನಗಳಿಂದ ಹೊಟ್ಟೆನೋವು, ಅಜೀರ್ಣ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಗೆ ಸ್ಕಾನಿಂಗ್ ಮಾಡಿಸಿದಾಗ ‘ಕಲ್ಲಿನ ಭ್ರೂಣ’ ಪತ್ತೆಯಾಗಿತ್ತು. ಇದರಿಂದಾಗಿ ಆಕೆ ಹಲವು ದಿನಗಳಿಂದ ಆಹಾರ ಸೇವಿಸಲು ಸಾಧ್ಯವಾಗಿರಲಿಲ್ಲ.
ಮಹಿಳೆಯು ಕೆಲವು ದಿನಗಳ ಹಿಂದೆ ಯುಎಸ್‌ನ ಡಿಆರ್ ಕಾಂಗೋದಿಂದ ಆಗಮಿಸಿದ್ದರು. ಸತ್ತ ಭ್ರೂಣವು ತನ್ನ ಹೊಟ್ಟೆಯ ಕೆಳಭಾಗವನ್ನು ನಿರ್ಬಂಧಿಸಿದ್ದರಿಂದ ಮತ್ತು ಅವಳ ಕರುಳಿನ ಮೇಲೆ ಒತ್ತಡ ಹೇರಿದ್ದರಿಂದ ಸಂಪೂರ್ಣವಾಗಿ ಆಹಾರವನ್ನು ನಿಲ್ಲಿಸಿದ ನಂತರ ಅವರು ತೀವ್ರ ಅಸ್ವಸ್ಥರಾದರು.
ವಾಮಾಚಾರದಿಂದ ಈ ರೀತಿಯಾಗಿರಬಹುದೆಂದು ನಂಬಿದ್ದ ಆಕೆ ಶಸ್ತ್ರಚಿಕಿತ್ಸೆಯನ್ನು ನಿರಾಕರಿಸಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ಮಹಿಳೆ ಸಾಯುವ ಮೊದಲು ಒಂಬತ್ತು ವರ್ಷಗಳ ಹಿಂದೆ ತನ್ನ ಮಗುವನ್ನು ಕಳೆದುಕೊಂಡಿದ್ದಾಗಿ ವೈದ್ಯರಿಗೆ ತಿಳಿಸಿದ್ದಳು.