HomeLatest Newsಬೆಸ್ಕಾಂನಲ್ಲಿ ಟಿಸಿ, ವಿದ್ಯುತ್ ಕಂಬ, ವೈರ್ ಸೇರಿ 3.85 ಕೋಟಿ ರೂ. ಗೋಲ್ಮಾಲ್: ಎಫ್ಐಆರ್ ದಾಖಲು

ಬೆಸ್ಕಾಂನಲ್ಲಿ ಟಿಸಿ, ವಿದ್ಯುತ್ ಕಂಬ, ವೈರ್ ಸೇರಿ 3.85 ಕೋಟಿ ರೂ. ಗೋಲ್ಮಾಲ್: ಎಫ್ಐಆರ್ ದಾಖಲು

ದಾವಣಗೆರೆ: ದಾವಣಗೆರೆ ಜಿಲ್ಲೆ ಹರಿಹರ ಬೆಸ್ಕಾಂ ಉಪ ವಿಭಾಗದಲ್ಲಿ ಭಾರಿ ಗೋಲ್ಮಾಲ್ ನಡೆದಿರುವುದು ಬೆಳಕಿಗೆ ಬಂದಿದೆ. ಬರೋಬ್ಬರಿ 3.85 ಕೋಟಿ ರೂಪಾಯಿಯಷ್ಟು ನಷ್ಟವಾಗಿದೆ. ಇಷ್ಟು ಮೌಲ್ಯದ ವಿವಿಧ ಸಾಮಗ್ರಿಗಳನ್ನು ಅಧಿಕಾರಿಗಳು ದುರ್ಬಳಕೆ ಮಾಡಿಕೊಂಡಿರುವುದು ಆಂತರಿಕ ಲೆಕ್ಕಪರಿಶೋಧನೆಯಲ್ಲಿ ಬಯಲಾಗಿದೆ.

ಬೆಸ್ಕಾಂ ಉಪ ವಿಭಾಗದ ಇಇ ರವಿಕಿರಣ್ ಅವರು ದೂರು ನೀಡಿದ್ದು, ಹರಿಹರದ ಬೆಸ್ಕಾಂ ಸಹಾಯಕ ಉಗ್ರಾಣ ಪಾಲಕನ ವಿರುದ್ಧ ಎಫ್ಐಆರ್ ದಾಖಲಾಗಿದೆ. ದೂರುದಾರ ರವಿಕಿರಣ್ ಅವರಿಂದ ಮಾಹಿತಿ ಪಡೆದ ಪೊಲೀಸರು ಕೇಸ್ ದಾಖಲಿಸಿ ಬೆಸ್ಕಾಂ ಹರಿಹರ ಉಗ್ರಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಉಗ್ರಾಣದಿಂದ 72.58 ಲಕ್ಷ ಮೌಲ್ಯದ ಟಿಸಿಗಳು ಮಾಯವಾಗಿವೆ. ವಿದ್ಯುತ್ ಪರಿವರ್ತಕ, ವಿದ್ಯುತ್ ಕಂಬ, ವೈರ್, ಲೈನ್ ಸಾಮಗ್ರಿ, ಪಿವಿಸಿ ಅಲ್ಯೂಮಿನಿಯಂ ರೀಡ್ ವೈರ್ ದುರ್ಬಳಕೆ ಮಾಡಿಕೊಂಡಿದ್ದು, 89,270 ಲೀಟರ್ ಟಿಸಿ ಆಯಿಲ್ ಲೆಕ್ಕವನ್ನು ಅಧಿಕಾರಿಗಳು ನೀಡಿಲ್ಲ. ಈ ಹಿನ್ನೆಲೆಯಲ್ಲಿ ತನಿಖೆ ಕೈಗೊಳ್ಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular