ಬೆಂಗಳೂರು: ಬೆಂಗಳೂರು ನಗರದಲ್ಲಿ ಕುಖ್ಯಾತ ಹನಿಟ್ರ್ಯಾಪ್ ಗ್ಯಾಂಗ್ ಬಂಧಿಸಲಾಗಿದೆ. ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಲಾಗಿದ್ದು, ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಅನಿಲ್ ಕುಮಾರ್, ಶಿವಶಂಕರ್, ಗಿರೀಶ, ರಾಮಮೂರ್ತಿ ಬಂಧಿತ ಆರೋಪಿಗಳಾಗಿದ್ದಾರೆ. ವೆಬ್ಸೈಟ್ ಮೂಲಕ ಗ್ರಾಹಕರನ್ನು ಈ ಗ್ಯಾಂಗ್ ಬಲೆಗೆ ಬೀಳಿಸುತ್ತಿತ್ತು. ಯುವತಿಯರ ಅರೆ ನಗ್ನ ಫೋಟೋ ಕಳುಹಿಸಿ ಗ್ರಾಹಕರನ್ನು ಈ ನಾಲ್ವರು ಕರೆಸಿಕೊಳ್ಳುತ್ತಿದ್ದರು.
ಬೇಗೂರಿನ ಬಾಡಿಗೆ ಕೋಣೆಗೆ ಆರೋಪಿಗಳು ಗ್ರಾಹಕರನ್ನು ಕರೆಸಿಕೊಳ್ಳುತ್ತಿದ್ದರು. ಅರೆ ನಗ್ನಗೊಳಿಸಿ ವಿಡಿಯೋ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದರು. ದೂರುದಾರ ವ್ಯಕ್ತಿಗೆ 10 ಲಕ್ಷ ರೂಪಾಯಿ ಹಣಕ್ಕೆ ಈ ಗ್ಯಾಂಗ್ ಬೇಡಿಕೆ ಇಟ್ಟಿತ್ತು. 3 ಲಕ್ಷ ರೂಪಾಯಿ ನೀಡಲು ಮುಂದಾಗಿದ್ದ ಟ್ರ್ಯಾಪ್ ಆಗಿದ್ದ ವ್ಯಕ್ತಿಗೆ ವಿಡಿಯೋ ಲೈಕ್ ಮಾಡುವುದಾಗಿ ಬೆದರಿಕೆ ಹಾಕಲಾಗಿತ್ತು. ಈ ಹಿನ್ನೆಲೆ ಬೇಗೂರು ಪೊಲೀಸ್ ಠಾಣೆಗೆ ಸಂತ್ರಸ್ತ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.