HomeAutoXUV 700 ನ ಹೊಸ ವೇರಿಯೆಂಟ್​ ಪರಿಚಯಿಸಲಿರುವ ಮಹೀಂದ್ರಾ

XUV 700 ನ ಹೊಸ ವೇರಿಯೆಂಟ್​ ಪರಿಚಯಿಸಲಿರುವ ಮಹೀಂದ್ರಾ

ಮಹೀಂದ್ರಾ & ಮಹೀಂದ್ರಾ ಎಕ್ಸ್​ಯುವಿ 700ನ ಹೊಸ ವೇರಿಯೆಂಟ್​ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಯೋಜಿಸುತ್ತಿದೆ.

ಪ್ರಸ್ತುತ, XUV700 MX ಮತ್ತು AX ಎಂಬ ಎರಡು ವೇರಿಯೆಂಟ್​ಗಳು ಲಭ್ಯವಿದೆ. ಇವುಗಳಲ್ಲಿ MX, AX3, AX5, AX7 ಮತ್ತು AX7L ಸೇರಿವೆ. ಇದಕ್ಕೆ ಮಹೀಂದ್ರಾ ಈಗ ಹೊಸ MX (E) ವೇರಿಯೆಂಟ್​ ಸೇರಿಸಲು ಸಜ್ಜಾಗುತ್ತಿದೆ. ಹೊಸ ವೇರಿಯೆಂಟ್​ ಕುರಿತು ಹೆಚ್ಚಿನ ವಿವರಗಳಿಲ್ಲದಿದ್ದರೂ, ಮಹೀಂದ್ರಾ ಕೆಲವು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಬಹುದು ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವೈಶಿಷ್ಟ್ಯಗಳ ವಿಷಯಕ್ಕೆ ಬರುವುದಾದರೆ ಹೊಸ ವೇರಿಯೆಂಟ್​ನಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಹೈ ಬೀಮ್ ಅಸಿಸ್ಟ್, ಟ್ರಾಫಿಕ್ ಸೈನ್ ರೆಕಗ್ನಿಷನ್, ಸ್ಮಾರ್ಟ್ ಪೈಲಟ್ ಅಸಿಸ್ಟ್, ಲೇನ್ ಕೀಪ್ ಅಸಿಸ್​ನಂಥ ಹೊಸ ವೈಶಿಷ್ಟ್ಯತೆಗಳನ್ನು ಅಳವಡಿಸುವ ಸಾಧ್ಯತೆ ಇದೆ.

XUV700 ನ ಪೆಟ್ರೋಲ್ ವೇರಿಯೆಂಟ್​ 2.0L ಎಂಜಿನ್​ನದ್ದಾಗಿದ್ದು, ಇದು 6-ಸ್ಪೀಡ್ ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗೆ ಸಂಯೋಜಿತವಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular