HomeCrimeಹೋಳಿ ಪಾರ್ಟಿಯಲ್ಲಿ ಮದ್ಯ ಕುಡಿದು ಕಾರಿಗೆ ಡಿಕ್ಕಿ: ಅಪ್ಪನ ತೊಡೆ ಮೇಲೆ ಕುಳಿತ ಕಂದನ ಸಾವು

ಹೋಳಿ ಪಾರ್ಟಿಯಲ್ಲಿ ಮದ್ಯ ಕುಡಿದು ಕಾರಿಗೆ ಡಿಕ್ಕಿ: ಅಪ್ಪನ ತೊಡೆ ಮೇಲೆ ಕುಳಿತ ಕಂದನ ಸಾವು

ಮುಂಬೈ: ಇಲ್ಲಿಯ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಹೋಳಿ ಹಬ್ಬದಂದು ಕಾರು ಅಪಘಾತದಲ್ಲಿ ಮೂರು ವರ್ಷದ ಮಗು ಸಾವನ್ನಪ್ಪಿದ ಘಟನೆ ನಡೆದಿದೆ. ಪಾನಮತ್ತ ಚಾಲಕನೊಬ್ಬ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ಸಂಭವಿಸಿದೆ.
ವೋಕ್ಸ್‌ ವ್ಯಾಗನ್ ಅತಿವೇಗದಲ್ಲಿ ಸ್ವಿಫ್ಟ್ ಡಿಜೈರ್‌ಗೆ ಡಿಕ್ಕಿ ಹೊಡೆದಾಗ ದುರ್ಘಟನೆ ಸಂಭವಿಸಿದೆ. ಡಿಜೈರ್ ಅನ್ನು ವಿನೋದ್ ಯಾದವ್ ಓಡಿಸುತ್ತಿದ್ದರು, ಅವರು ತಮ್ಮ ಸ್ನೇಹಿತ ಓಂ ಚೌಧರಿ (25) ಮತ್ತು ಅವರ ಮೂರು ವರ್ಷದ ಮಗಳು ಸ್ವಾತಿಗೆ ಲಿಫ್ಟ್ ನೀಡುತ್ತಿದ್ದರು.

ಸ್ವಾತಿ ಮುಂಭಾಗದ ಪ್ರಯಾಣಿಕರ ಸೀಟಿನಲ್ಲಿ ಚೌಧರಿ ಅವರ ತೊಡೆಯ ಮೇಲೆ ಕುಳಿತಿದ್ದಾಗ ಕಾರು ಹಿಂದಿನಿಂದ ಡಿಕ್ಕಿ ಹೊಡೆದಿದೆ. ಸ್ವಾತಿಯ ತಲೆಯು ಡ್ಯಾಶ್‌ಬೋರ್ಡ್‌ಗೆ ತಗುಲಿ ತೀವ್ರವಾಗಿ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾಳೆ. ಯಾದವ್ ಮತ್ತು ಚೌಧರಿ ಅವರಿಗೂ ಗಾಯಗಳಾಗಿವೆ, ಎಲ್ಲಾ ಪ್ರಯಾಣಿಕರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆರೋಪಿ ವಿಶ್ವಾಸ್ ಅತ್ತಾವರ (54) ಎಂಬಾತನನ್ನು ಬಂಧಿಸಿದ್ದಾರೆ. ಈತ ಹೋಳಿ ಪಾರ್ಟಿಯಲ್ಲಿ ಸೇವಿಸಿದ್ದ ಮದ್ಯದ ಅಮಲಿನಲ್ಲಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular