HomeKarnatakaBIG NEWS: ಬಿಜೆಪಿ ಮೇಲ್ಜಾತಿಯವರ ಪಕ್ಷವಾಗಿದ್ದು ಕೆಳ ವರ್ಗ ಹಾಗೂ ನಾಡಿನ ಅಭಿವೃದ್ಧಿ ಚಿಂತನೆ ಅವರಿಗಿಲ್ಲ;...

BIG NEWS: ಬಿಜೆಪಿ ಮೇಲ್ಜಾತಿಯವರ ಪಕ್ಷವಾಗಿದ್ದು ಕೆಳ ವರ್ಗ ಹಾಗೂ ನಾಡಿನ ಅಭಿವೃದ್ಧಿ ಚಿಂತನೆ ಅವರಿಗಿಲ್ಲ; ಬಿಜೆಪಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಬಿಜೆಪಿ, ಮೇಲ್ಜಾತಿ ಹಾಗೂ ಶ್ರೀಮಂತರ ಪರವಾದ ಪಕ್ಷವಾಗಿದ್ದು, ಕೆಳ ವರ್ಗದ ಹಾಗೂ ನಾಡಿನ ಅಭಿವೃದ್ಧಿ ಬಗ್ಗೆ ಅವರಿಗೆ ಯಾವುದೇ ಕಾಳಜಿ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೋಟಿಗಟ್ಟಲೆ ಹಣ ಚೆಲ್ಲಿ ಚುನಾವಣೆಯಲ್ಲಿ ಗೆಲ್ಲಬೇಕೆಂಬ ಉದ್ದೇಶವನ್ನು ಬಿಜೆಪಿಯವರು ಹೊಂದಿದ್ದಾರೆ. ಯಡಿಯೂರಪ್ಪನವರ ಆಪ್ತ ಮಾಡಾಳ್ ವಿರೂಪಾಕ್ಷಪ್ಪನ ಮನೆಯಲ್ಲಿ ಕೋಟಿ ಕೋಟಿ ಹಣ ಪತ್ತೆಯಾಗಿರುವುದೇ ಇದಕ್ಕೆ ಸಾಕ್ಷಿ ಎಂದರು.

ಇನ್ನು ಲೋಕಾಯುಕ್ತವನ್ನು ನಮ್ಮ ಸರ್ಕಾರ ಮುಚ್ಚಿ ಬಿಟ್ಟಿದೆ ಎಂದು ಬಿಜೆಪಿ ನಾಯಕರು ಸುಳ್ಳು ಹೇಳುತ್ತಿದ್ದಾರೆ. ಈ ಹಿಂದೆ ಲೋಕಾಯುಕ್ತರ ಮನೆಯಲ್ಲಿ ಭ್ರಷ್ಟಾಚಾರ ಇತ್ತು ಎಂಬ ಕಾರಣಕ್ಕೆ ಎಸಿಬಿ ರಚನೆ ಮಾಡಿದ್ದೆವು. ಇದರ ಜೊತೆಗೆ ಲೋಕಾಯುಕ್ತವೂ ಕಾರ್ಯ ನಿರ್ವಹಿಸುತ್ತಿತ್ತು. ಇದೀಗ ಎಸಿಬಿ ಬೇಡ, ಲೋಕಾಯುಕ್ತ ಕೆಲಸ ಮಾಡಲಿ ಎಂದು ಕೋರ್ಟ್ ಹೇಳಿದೆ ಹೊರತು ಇವರ ಸರ್ಕಾರ ಆ ಕೆಲಸ ಮಾಡಿಲ್ಲ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular