
ಬಿಜೆಪಿಯವರು ಈ ಮೊದಲು ವಿಧಾನಸಭಾ ಚುನಾವಣೆಗೆ ಹೋಗುವ ಕುರಿತಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಆದರೆ ಇದು ದಿನೇ ದಿನೇ ಮುಂದಕ್ಕೆ ಹೋಗುತ್ತಿದೆ. ರಾಜ್ಯದ ಜನತೆಯೇ ಅವರಿಗೆ ಪ್ರತಿ ದಿನ ಶಾಕ್ ನೀಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಪಾರ್ಟಿ ಚುನಾವಣೆ ಯಾವಾಗ ಘೋಷಿಸಿದರೂ ಅದಕ್ಕೆ ಸಿದ್ಧವಾಗಿದೆ. ಆದರೆ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಪ್ರತಿದಿನವೂ ಬಹಿರಂಗವಾಗುತ್ತಿರುವುದರಿಂದ ಚುನಾವಣೆಗೆ ಹೋಗಲು ಅವರು ಧೈರ್ಯ ಮಾಡುತ್ತಿಲ್ಲ. ಚುನಾವಣೆ ಘೋಷಣೆಯಾದ ಬಳಿಕ ಮತ್ತಷ್ಟು ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಿದರು.

