HomeHealthಪ್ರತಿದಿನ ಬೆಳಗ್ಗೆ ಎದ್ದತಕ್ಷಣ ಈ ಎಲೆಗಳನ್ನು ಜಗಿದು ತಿಂದರೆ ಅಪಾಯಕಾರಿ ರೋಗಗಳನ್ನು ಇಡಬಹುದು ದೂರ....!

ಪ್ರತಿದಿನ ಬೆಳಗ್ಗೆ ಎದ್ದತಕ್ಷಣ ಈ ಎಲೆಗಳನ್ನು ಜಗಿದು ತಿಂದರೆ ಅಪಾಯಕಾರಿ ರೋಗಗಳನ್ನು ಇಡಬಹುದು ದೂರ….!

ಸಾಮಾನ್ಯವಾಗಿ ಭಾರತದ ಪ್ರತಿ ಮನೆಯಲ್ಲೂ ಅಡುಗೆಗೆ ಕರಿಬೇವನ್ನು ಬಳಸಲಾಗುತ್ತದೆ. ಅದರಲ್ಲೂ ದಕ್ಷಿಣ ಭಾರತದ ಬಹುತೇಕ ಖಾದ್ಯಗಳು ಕರಿಬೇವಿನ ಸೊಪ್ಪಿಲ್ಲದೇ ಇದ್ದರೆ ಅಪೂರ್ಣವಾಗುತ್ತವೆ. ಆಹಾರದ ರುಚಿ ಹೆಚ್ಚಿಸುವ ಕರಿಬೇವಿನ ಎಲೆಗಳಲ್ಲಿ ಆರೋಗ್ಯದ ಭಂಡಾರವೇ ಇದೆ. ಹಲವರು ಇದನ್ನು ಮಾರುಕಟ್ಟೆಯಿಂದ ಖರೀದಿಸಿದರೆ, ಇನ್ನು ಕೆಲವರು ಅದನ್ನು ಮನೆಯಲ್ಲಿ ಕುಂಡದಲ್ಲಿ ಬೆಳೆಸುತ್ತಾರೆ.

ಕರಿಬೇವಿನ ಸೊಪ್ಪು ಆರೋಗ್ಯದ ನಿಧಿ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಂಜಕ, ಕ್ಯಾಲ್ಸಿಯಂ, ಕಬ್ಬಿಣ, ತಾಮ್ರ, ವಿಟಮಿನ್‌ಗಳು ಮತ್ತು ಮೆಗ್ನೀಸಿಯಮ್‌ನಂತಹ ಪೋಷಕಾಂಶಗಳು ಕರಿಬೇವಿನ ಎಲೆಗಳಲ್ಲಿವೆ. ಇವು  ದೇಹಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತವೆ. ಪ್ರತಿದಿನ ಬೆಳಿಗ್ಗೆ 3 ರಿಂದ 4 ಕರಿಬೇವಿನ ಎಲೆಗಳನ್ನು ಅಗಿದು ತಿನ್ನುವುದರಿಂದ ಹಲವಾರು ಕಾಯಿಲೆಗಳನ್ನು ದೂರವಿಡಬಹುದು.

1. ಕಣ್ಣುಗಳಿಗೆ ಒಳ್ಳೆಯದು

ಕರಿಬೇವಿನ ಎಲೆಗಳನ್ನು ತಿನ್ನುವುದರಿಂದ ರಾತ್ರಿ ಕುರುಡುತನ ಅಥವಾ ಕಣ್ಣುಗಳಿಗೆ ಸಂಬಂಧಿಸಿದ ಇತರ ಅನೇಕ ಕಾಯಿಲೆಗಳ ಅಪಾಯವನ್ನು ತಪ್ಪಿಸಬಹುದು. ಏಕೆಂದರೆ ಇದರಲ್ಲಿ ಕಣ್ಣುಗಳಿಗೆ ಅಗತ್ಯವಾದ ಪೋಷಕಾಂಶ ವಿಟಮಿನ್ ಎ ಕಂಡುಬರುತ್ತದೆ. ಇದು ದೃಷ್ಟಿ ಹೆಚ್ಚಿಸಲು ಸಹಾಯ ಮಾಡುತ್ತದೆ.

2. ಮಧುಮೇಹ ನಿವಾರಣೆಗೆ ಸಹಾಯಕ

ಕರಿಬೇವಿನ ಎಲೆಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಹೈಪೊಗ್ಲಿಸಿಮಿಕ್ ಗುಣಲಕ್ಷಣಗಳನ್ನು ಹೊಂದಿವೆ. ಹಾಗಾಗಿ ಇವುಗಳ ಸೇವನೆಯಿಂದ ಮಧುಮೇಹ ರೋಗಿಗಳಿಗೆ ಸಾಕಷ್ಟು ಪ್ರಯೋಜನವಾಗುತ್ತದೆ.

3. ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ

ಕರಿಬೇವಿನ ಎಲೆಗಳನ್ನು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಗಿಯಬೇಕು. ಏಕೆಂದರೆ ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಮಲಬದ್ಧತೆ, ಎಸಿಡಿಟಿ, ಹೊಟ್ಟೆ ಉಬ್ಬರಿಸುವುದು ಸೇರಿದಂತೆ ಎಲ್ಲಾ ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸುತ್ತದೆ.

4. ಸೋಂಕಿನ ವಿರುದ್ಧ ರಕ್ಷಣೆ

ಎಂಟಿಫಂಗಲ್ ಮತ್ತು ಆ್ಯಂಟಿಬಯೋಟಿಕ್ ಗುಣಗಳು ಕರಿಬೇವಿನ ಎಲೆಗಳಲ್ಲಿ ಕಂಡುಬರುತ್ತವೆ. ಇದು ಅನೇಕ ರೀತಿಯ ಸೋಂಕುಗಳನ್ನು ತಡೆಯುತ್ತದೆ ಮತ್ತು ರೋಗಗಳ ಅಪಾಯವನ್ನು ಕಡಿಮೆ ಮಾಡಬಲ್ಲದು.

5. ತೂಕ ಇಳಿಸಲು ಸಹಾಯಕ

ಕರಿಬೇವಿನ ಎಲೆಗಳನ್ನು ಜಗಿದು ತಿನ್ನುವುದರಿಂದ ತೂಕ ಇಳಿಸಬಹುದು.  ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. ಏಕೆಂದರೆ ಇದರಲ್ಲಿ ಈಥೈಲ್ ಅಸಿಟೇಟ್, ಮಹಾನಿಂಬಿನ್ ಮತ್ತು ಡೈಕ್ಲೋರೋಮೆಥೇನ್ ನಂತಹ ಪೋಷಕಾಂಶಗಳಿವೆ.

For Latest News Updates, Join Our Whatsapp Community🚩
RELATED ARTICLES

Most Popular