HomeKarnatakaBIG NEWS: ದೇಶದಲ್ಲಿಯೇ ಕಾಂಗ್ರೆಸ್ 'ಬಂದ್' ಆಗುತ್ತಿದೆ; ಮಾರ್ಚ್ 9ರ ಬಂದ್ ಕರೆಗೆ ಸಿಎಂ ಬೊಮ್ಮಾಯಿ...

BIG NEWS: ದೇಶದಲ್ಲಿಯೇ ಕಾಂಗ್ರೆಸ್ ‘ಬಂದ್’ ಆಗುತ್ತಿದೆ; ಮಾರ್ಚ್ 9ರ ಬಂದ್ ಕರೆಗೆ ಸಿಎಂ ಬೊಮ್ಮಾಯಿ ಲೇವಡಿ

ಬಿಜೆಪಿ ಸರ್ಕಾರದ ಭ್ರಷ್ಟಾಚಾರ ವಿರೋಧಿಸಿ ಮಾರ್ಚ್ 9ರಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಎರಡು ಗಂಟೆಗಳ ಕಾಲ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ.

ಬೆಳಗ್ಗೆ 9:00 ರಿಂದ 11:00 ಗಂಟೆಯವರೆಗೆ ಈ ಬಂದ್ ನಡೆಯಲಿದ್ದು, ಈ ವಿಚಾರ ಕುರಿತಂತೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ಇಡೀ ದೇಶದಲ್ಲಿಯೇ ಬಂದ್ ಆಗುತ್ತಿದೆ ಎಂದು ಲೇವಡಿ ಮಾಡಿದ್ದಾರೆ.

ಭ್ರಷ್ಟಾಚಾರ ಕುರಿತು ಕಾಂಗ್ರೆಸ್ ಆರೋಪ ಮಾಡುವ ಮುನ್ನ ಅವರು ಪರಿಶುದ್ಧರಿರಬೇಕು. ಆದರೆ ಕಾಂಗ್ರೆಸ್ ನವರು ಅಧಿಕಾರದಲ್ಲಿದ್ದಾಗ ಹಾಸಿಗೆ, ದಿಂಬು, ಬಿಸ್ಕೆಟ್, ಕಾಫಿಯಲ್ಲೂ ಭ್ರಷ್ಟಾಚಾರವೆಸಗಿದ್ದಾರೆ. ಇಂಥವರು ಈಗ ಬಿಜೆಪಿ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular