HomeKarnatakaBIG NEWS: ಸಿದ್ದರಾಮಯ್ಯ ಕೂಡ ನನ್ನ ಆಪ್ತರೇ ಎಂದು ಟಾಂಗ್ ನೀಡಿದ ಯಡಿಯೂರಪ್ಪ

BIG NEWS: ಸಿದ್ದರಾಮಯ್ಯ ಕೂಡ ನನ್ನ ಆಪ್ತರೇ ಎಂದು ಟಾಂಗ್ ನೀಡಿದ ಯಡಿಯೂರಪ್ಪ

ಬೆಳಗಾವಿ: ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಕಾಂಗ್ರೆಸ್ ಒತ್ತಾಯಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮಾಡಾಳ್ ವಿರೂಪಾಕ್ಷಪ್ಪ ಬಗ್ಗೆ ಲೋಕಾಯುಕ್ತ ಕ್ರಮ ಜರುಗಿಸುತ್ತದೆ ಹೊರತು ಸರ್ಕಾರವಲ್ಲ ಎಂದರು.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧ ಕ್ರಮ ಕೈಗೊಳ್ಳುವುದು ಲೋಕಾಯುಕ್ತ ಹೊರತು ಸರ್ಕಾರ, ನಾನು ಅಥವಾ ಬೇರೆಯವರಲ್ಲ. ನೋಡೋಣ ಯಾವ ರೀತಿ ಕ್ರಮಗಳು ಆಗಲಿವೆ ಎಂಬುದನ್ನು ಎಂದರು.

ಮಾಡಾಳ್ ವಿರೂಪಾಕ್ಷಪ್ಪ ನಿಮ್ಮ ಆಪ್ತರು ಎಂದು ಕಾಂಗ್ರೆಸ್ ನಾಯಕರು ಆರೋಪಿಸುತ್ತಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಯಡಿಯೂರಪ್ಪ, ವಿರೂಪಾಕ್ಷಪ್ಪ ಮಾತ್ರವಲ್ಲ, ಸಿದ್ದರಾಮಯ್ಯ ಕೂಡ ನಮ್ಮ ಆಪ್ತರೇ. ಎಲ್ಲರೂ ನನ್ನ ಆಪ್ತರೇ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular