HomeKarnatakaBIG NEWS: ಹಲ್ಲೆ ಯತ್ನ; ಕಾಂಗ್ರೆಸ್ ಶಾಸಕಿ ವಿರುದ್ಧ ಮಾಜಿ ಶಾಸಕನ ಆರೋಪ

BIG NEWS: ಹಲ್ಲೆ ಯತ್ನ; ಕಾಂಗ್ರೆಸ್ ಶಾಸಕಿ ವಿರುದ್ಧ ಮಾಜಿ ಶಾಸಕನ ಆರೋಪ

ಕಾರವಾರ: ಮಾಜಾಳಿ ಪಂಚಾಯಿತಿ ಪಿಡಿಓ ಬದಲಾವಣೆ ವಿರೋಧಿಸಿ ಮನವಿಗೆ ಬಂದಾಗ ಕಾಗ್ರೆಸ್ ಶಾಸಕಿ ರೂಪಾಲಿ ನಾಯಕ್, ದರ್ಪ ತೋರಿ ಹಲ್ಲೆಗೆ ಯತ್ನ ನಡೆಸಿದ್ದಾರೆ ಎಂದು ಮಾಜಿ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಆರೋಪಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಕಾಂಗ್ರೆಸ್ ನ ಹಾಲಿ ಹಾಗೂ ಮಾಜಿ ಶಾಸಕರ ನಡುವೆ ಗಲಾಟೆ ನಡೆದಿದ್ದು, ರೂಪಾಲಿ ನಾಯಕ್ ಹಾಗೂ ಸತೀಶ್ ಸೈಲ್ ನಡುವೆ ಮಾತಿನ ಚಕಮಕಿ ನಡೆದಿದೆ.

ಈ ವೇಳೆ ರೂಪಾಲಿ ನಾಯಕ್ ಮಾಜಿ ಶಾಸಕರನ್ನು ಕುಡುಕ ಎಂದು ಬೈದು ಮೇಜಿನ ಮೇಲಿದ್ದ ಪೇಪರ್ ವೇಟ್ ನಿಂದ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಸತೀಶ್ ಸೈಲ್ ಆರೋಪಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular