ಆಸ್ಟ್ರೇಲಿಯನ್ ವ್ಯಕ್ತಿಯೊಬ್ಬರಿಗೆ ವರ್ಕ್ ಫ್ರಮ್ ಹೋಂ ಕೊಟ್ಟಿರುವುದಕ್ಕೆ ಸಿಟ್ಟಿಗೆದ್ದು ತಮ್ಮ ಕಂಪೆನಿ ಕಾಮನ್ವೆಲ್ತ್ ಬ್ಯಾಂಕ್ ಆಫ್ ಆಸ್ಟ್ರೇಲಿಯ ವಿರುದ್ಧ $172,000 (₹ 95 ಲಕ್ಷ ಅಂದಾಜು) ಪರಿಹಾರದ ಮೊಕದ್ದಮೆ ದಾಖಲು ಮಾಡಿದ್ದಾರೆ.
ಕಂಪೆನಿಯು ತನ್ನ ಒಂದು ಶಾಖೆಯನ್ನು ಮುಚ್ಚಿದ್ದ ಹಿನ್ನೆಲೆಯಲ್ಲಿ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡುವಂತೆ ಹೇಳಿದೆ. ಇದು ಶಾಶ್ವತವಾಗಿ ಮನೆಯಿಂದ ಕೆಲಸ ಮಾಡುವುದಾಗಿದೆ. ಈ ಪ್ರಸ್ತಾಪವನ್ನು ನಿರಾಕರಿಸಿದರೆ ವೇತನ ಪಡೆಯುವುದಿಲ್ಲ ಎಂದು ಕಂಪೆನಿ ಹೇಳಿತ್ತು.
ಇದರಿಂದ ರೊಚ್ಚಿಗೆದ್ದಿರುವ ಉದ್ಯೋಗಿಯೊಬ್ಬರು ಕೇಸ್ ದಾಖಲಿಸಿದ್ದಾರೆ. ತಾವು 20 ವರ್ಷ ಕಚೇರಿಯಲ್ಲಿ ಕೆಲಸ ಮಾಡಿ ಅದಕ್ಕೆ ಹೊಂದಿಕೊಂಡಿದ್ದು, ಈಗ ಏಕಾಏಕಿ ಮನೆಯಲ್ಲಿ ಕೆಲಸ ಮಾಡುವಂತೆ ಒತ್ತಾಯ ಮಾಡುವುದು ಸರಿಯಲ್ಲ. ಇದು ತಮ್ಮ ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರುತ್ತಿದೆ ಮತ್ತು ಆರೋಗ್ಯದ ಮೇಲೆ ಹಾನಿ ಉಂಟು ಮಾಡುತ್ತಿದೆ ಎಂದು ದೂರಿದ್ದಾರೆ.
ಲಾಕ್ಡೌನ್, ಕೋವಿಡ್ ಸಮಯದಲ್ಲಿ ಎಷ್ಟೋ ಮಂದಿಗೆ ಇದೇ ರೀತಿ ಮನೆಯಿಂದ ಕೆಲಸ ಮಾಡುವ ಅವಕಾಶ ನೀಡಲಾಗಿತ್ತು. ಈ ಸಂದರ್ಭದಲ್ಲಿ ಕೆಲವರು ಖುಷಿ ಪಟ್ಟಿದ್ದರೆ, ಇನ್ನು ಹಲವರು ಈ ರೀತಿ ಕೆಲಸ ಬೇಡ ಎಂದು ಗೋಳು ತೋಡಿಕೊಳ್ಳುತ್ತಿದ್ದರು. ಕಚೇರಿ ಎಷ್ಟೇ ದೂರವಾದರೂ ಪರವಾಗಿಲ್ಲ, ಅದೇ ಬೆಸ್ಟ್ ಎನ್ನುತ್ತಿದ್ದರು. ಇಲ್ಲಿಯೂ ಹೀಗೆಯೇ ಆಗಿದೆ.