HomeEntertainmentಆಸ್ತಿ ವಿಚಾರದಲ್ಲಿ ಸಂಕಷ್ಟಕ್ಕೆ ಸಿಲುಕಿದ ಶಾರುಖ್ ಪತ್ನಿ ಗೌರಿ ಖಾನ್...!

ಆಸ್ತಿ ವಿಚಾರದಲ್ಲಿ ಸಂಕಷ್ಟಕ್ಕೆ ಸಿಲುಕಿದ ಶಾರುಖ್ ಪತ್ನಿ ಗೌರಿ ಖಾನ್…!

ಖ್ಯಾತ ಬಾಲಿವುಡ್ ನಟ ಶಾರುಖ್ ಖಾನ್ ಪತ್ನಿ ಗೌರಿ ಖಾನ್, ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರು ರಾಯಭಾರಿಯಾಗಿರುವ ಕಂಪನಿಯೊಂದು ಹೇಳಿದಂತೆ ಫ್ಲ್ಯಾಟ್ ನೀಡದ ಕಾರಣ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.

ಮುಂಬೈ ಮೂಲದ ಉದ್ಯಮಿ ಜಸ್ವಂತ್ ಶಾ ಎಂಬವರು ಉತ್ತರ ಪ್ರದೇಶದ ಲಕ್ನೋದಲ್ಲಿ ಗೌರಿ ಖಾನ್ ವಿರುದ್ಧ ದೂರು ದಾಖಲಿಸಿದ್ದು, ಗೌರಿ ಖಾನ್ ರಾಯಭಾರಿಯಾಗಿರುವ ತುಳಸಿಯಾನಿ ಕನ್ಸ್ಟ್ರಕ್ಷನ್ ಕಂಪನಿ, ತಮ್ಮಿಂದ 85 ಲಕ್ಷ ರೂಪಾಯಿ ಪಡೆದಿದ್ದರೂ ಇನ್ನೂ ಫ್ಲಾಟ್ ನೀಡಿಲ್ಲ ಎಂದು ಆರೋಪಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗೌರಿ ಖಾನ್ ಸೇರಿದಂತೆ ತುಳಸಿ ಯಾನಿ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಅನಿಲ್ ಕುಮಾರ್ ತುಳಸಿಯಾನಿ ಹಾಗೂ ನಿರ್ದೇಶಕ ಮಹೇಶ್ ತುಳಸಿಯಾನಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 409ರ ಅಡಿ ನಂಬಿಕೆ ದ್ರೋಹದ ಪ್ರಕರಣ ದಾಖಲಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular