ತಂದೆ ಮತ್ತು ಮಗಳ ನಡುವಿನ ಬಾಂಧವ್ಯವನ್ನು ವಿವರಿಸಲು ನಮಗೆ ಪದಗಳ ಅಗತ್ಯವೇ ಇಲ್ಲ ಅಲ್ಲವೆ ? ಇದು ಅಸ್ತಿತ್ವದಲ್ಲಿರುವ ಅತ್ಯಂತ ಶುದ್ಧವಾದ, ಅತ್ಯಂತ ನಿಸ್ವಾರ್ಥ ಪ್ರೀತಿ. ಅಂಥದ್ದೇ ಒಂದು ಭಾವನಾತ್ಮಕ ವೀಡಿಯೊ ಈಗ ವೈರಲ್ ಆಗಿದೆ.
ಮಗಳು ತಂದೆಗೆ ತಿಳಿಯದಂತೆ ಅವರಿಗೆ ಕಿಡ್ನಿ ದಾನ ಮಾಡಿರುವ ವಿಡಿಯೋ ಇದಾಗಿದೆ. ಮಗಳೇ ತಮಗೆ ಕಿಡ್ನಿ ನೀಡಿದ್ದು ಎಂದು ತಿಳಿದ ತಕ್ಷಣ ತಂದೆಯ ಪ್ರತಿಕ್ರಿಯೆ ಹೇಗೆ ಇತ್ತು ಎಂಬುದನ್ನು ಈ ವಿಡಿಯೋ ತೋರಿಸುತ್ತದೆ.
ಈಗ ವೈರಲ್ ಆಗಿರುವ ವೀಡಿಯೊವನ್ನು ಟ್ವಿಟ್ಟರ್‌ನಲ್ಲಿ ಫಿಗೆನ್ ಎಂಬ ಬಳಕೆದಾರರು ಹಂಚಿಕೊಂಡಿದ್ದಾರೆ. ಚಿಕ್ಕ ವಿಡಿಯೋದಲ್ಲಿ, ಒಬ್ಬ ಮಹಿಳೆ ತನ್ನ ತಂದೆಯನ್ನು ದಾಖಲಿಸಿದ ಆಸ್ಪತ್ರೆಯ ವಾರ್ಡ್‌ಗೆ ಪ್ರವೇಶಿಸುವುದನ್ನು ಕಾಣಬಹುದು. ಅವರಿಗೆ ಮಗಳೇ ಕಿಡ್ನಿ ದಾನ ಮಾಡಿರುವುದು ತಿಳಿದಿರಲಿಲ್ಲ. ಸತ್ಯವನ್ನು ಕಂಡುಕೊಂಡ ನಂತರ, ಅವರು ಕಣ್ಣೀರು ಸುರಿಸುತ್ತಾರೆ. ಮಗಳೇ ಸಾಂತ್ವನ ಮಾಡುವುದನ್ನು ವಿಡಿಯೋದಲ್ಲಿ ನೋಡಬಹುದು.
“ಅವಳು ವಿಶ್ವದ ಅದ್ಭುತ ಹೆಣ್ಣುಮಕ್ಕಳಲ್ಲಿ ಒಬ್ಬಳು” ಎಂದು ಪೋಸ್ಟ್‌ಗೆ ಶೀರ್ಷಿಕೆ ಕೊಡಲಾಗಿದೆ. ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ವೀಡಿಯೊವನ್ನು 2 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದೆ.
https://twitter.com/TheFigen_/status/1630293565615095810?ref_src=twsrc%5Etfw%7Ctwcamp%5Etweetembed%7Ctwterm%5E1630293565615095810%7Ctwgr%5E7d5dfbe5c3bc95400bc224384f0ca46533f3dfe8%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Ffather-breaks-down-after-finding-out-his-daughter-was-his-anonymous-kidney-donor-we-are-not-crying-you-are-2340612-2023-02-28