HomeKarnatakaಮೊಮ್ಮಗನ ಮೃತದೇಹ ನೋಡಿದ ತಾತ ಹೃದಯಘಾತದಿಂದ ಸಾವು

ಮೊಮ್ಮಗನ ಮೃತದೇಹ ನೋಡಿದ ತಾತ ಹೃದಯಘಾತದಿಂದ ಸಾವು

ವಿಜಯಪುರ: ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ ಮೊಮ್ಮಗನ ಮೃತ ದೇಹ ನೋಡಿದ ತಾತನೂ ಕೂಡ ಕ್ಷಣದಲ್ಲೇ ಹೃದಯಘಾತದಿಂದ ಮರಣವನ್ನಪ್ಪಿದ ಘಟನೆ ಗೊಳಸಂಗಿ ಸಮೀಪದ ವಂದಾಲ ಗ್ರಾಮದಲ್ಲಿ ನಡೆದಿದೆ.

ಅಭಿಷೇಕ ಚಂದ್ರಶೇಖರ ಪ್ಯಾಟಿಗೌಡ್ರ (18) ಗುಳೇದಗುಡ್ಡದಲ್ಲಿರುವ ಚಿಕ್ಕಮ್ಮನ ಮನೆಯಲ್ಲಿ ಇದ್ದುಕೊಂಡು ದ್ವಿತೀಯ ಪಿಯುಸಿ ಅಭ್ಯಾಸ ಮಾಡುತ್ತಿದ್ದನು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸೋಮವಾರ ರಾತ್ರಿ ಬೈಕ್‌ನಲ್ಲಿ ಹೋಗುತ್ತಿದ್ದಾಗ ಟಿಪ್ಪರ್ ಲಾರಿಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮೊಮ್ಮಗನ ಮೃತದೇಹವನ್ನು ಕಂಡ ತಾತನಿಗೆ ಆಘಾತವಾಗಿದ್ದು ಕ್ಷಣದಲ್ಲೇ ಹೃದಯಸ್ತಂಭದಿಂದ ಮೃತಪಟ್ಟಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular