ಎರಡು ಕುರ್ಚಿಗಳ ಮೇಲೆ ಸರ್ಕಸ್ ಮಾಡಿ ಇನ್ಸ್ಟಾಗ್ರಾಮ್ನಲ್ಲಿ ರೀಲ್ಸ್ ಮಾಡಲು ಹೋದ ಹುಡುಗಿಯೊಬ್ಬಳಿಗೆ ಅಪಾಯ ಆಗಿರುವ ಭಯಾನಕ ಘಟನೆಯ ವಿಡಿಯೋ ವೈರಲ್ ಆಗಿದೆ.
ಹುಡುಗಿ ಮೊದಲ ಕುರ್ಚಿಯನ್ನು ಏರುತ್ತಾಳೆ ಮತ್ತು ಕುರ್ಚಿಯ ಹಿಂಭಾಗದ ಮೇಲ್ಭಾಗದಲ್ಲಿ ತನ್ನ ಪಾದವನ್ನು ಹಾಕುತ್ತಾಳೆ. ಅವಳು ಮೊದಲು ಸಮತೋಲನದಲ್ಲಿಯೇ ಇರುತ್ತಾಳೆ.
ಬ್ಯಾಲೆನ್ಸ್ ಮಾಡುತ್ತಾ ಮುಂದಿನ ಕುರ್ಚಿಯ ಆಸನದ ಮೇಲೆ ಇಳಿಯುತ್ತಾಳೆ. ಇದು ಎಲ್ಲಾ ಚೆನ್ನಾಗಿಯೇ ಕಾಣುತ್ತದೆ. ಈಗ ಆಕೆಯ ಸರ್ಕಸ್ ಮುಂದುವರೆಯುತ್ತದೆ. ಎರಡನೇ ಕುರ್ಚಿಯಿಂದ ನೆಲದ ಮೇಲೆ ಪರಿಪೂರ್ಣವಾದ ಲ್ಯಾಂಡಿಂಗ್ ಮಾಡಲು ಹೋಗುತ್ತಾಳೆ.
ಎಡವಟ್ಟು ಆಗುವುದು ಅಲ್ಲಿಯೇ. ಆಕೆ ಸಮತೋಲನ ಕಳೆದುಕೊಂಡು ಕುರ್ಚಿಯ ಹಿಂಭಾಗದಿಂದ ಜಾರಿ ಬೀಳುತ್ತಾಳೆ. ಅಲ್ಲಿರುವ ಪೀಠೋಪಕರಣಗಳ ಮೇಲೆ ಬೀಳುತ್ತಾಳೆ. ಇದರ ವಿಡಿಯೋ ವೈರಲ್ ಆಗಿದ್ದು, ಹುಚ್ಚುಹುಚ್ಚಾಗಿ ಸಾಹಸ ಮಾಡಲು ಹೋಗಿ ಜೀವ ಕಳೆದುಕೊಳ್ಳಬೇಡಿ ಎಂದು ಹಲವು ಬಳಕೆದಾರರು ಹೇಳಿದ್ದಾರೆ.
https://youtu.be/SKrnenZdwcE