
ಶ್ವಾನಪ್ರಿಯರಾದ ಬಾಲರಾಜ್ ಝಾಲಾ ಮತ್ತು ಅವರ ಪತ್ನಿ ಈ ಡಾಬಾವನ್ನ ಸ್ಥಾಪಿಸಿದ್ದಾರೆ. ಡಾಬಾದಲ್ಲಿ ನಾಯಿಗಳಿಗೆ ಆಹಾರ, ವಸತಿ ಮತ್ತು ಹುಟ್ಟುಹಬ್ಬದ ಆಚರಣೆಯ ಆಯ್ಕೆಗಳನ್ನು ನೀಡುತ್ತದೆ ಮತ್ತು ಸಾಕುನಾಯಿಗೆ ಆಹಾರ ವಿತರಣಾ ಸೇವೆಗಳನ್ನು ಸಹ ನೀಡಲಾಗುತ್ತದೆ.
ಸಸ್ಯಾಹಾರಿ ಮತ್ತು ಮಾಂಸಾಹಾರಿ ವಿಶೇಷತೆಗಳನ್ನೊಳಗೊಂಡಂತೆ ಅತಿ ಕಡಿಮೆ ಬೆಲೆ 7 ರೂಪಾಯಿಯಿಂದ ಹಿಡಿದು 500 ರೂ. ವರೆಗಿನ ಬೆಲೆಯಲ್ಲಿ ಡಾಬಾದಲ್ಲಿ ವಿವಿಧ ನಾಯಿ ಆಹಾರವನ್ನು ಒದಗಿಸಲಾಗುತ್ತದೆ. ಹೆಚ್ಚುವರಿಯಾಗಿ ನಾಯಿಗಳ ಜನ್ಮದಿನ ಆಚರಣೆಗಾಗಿ ವೈಯಕ್ತಿಕ ವಿಶೇಷ ಕೇಕ್ ಗಳನ್ನೂ ಸಹ ತಯಾರಿಸಲಾಗುತ್ತದೆ.

