HomeAgricultureBREAKING: ಇಸ್ರೇಲ್ ನಲ್ಲಿ ನಾಪತ್ತೆಯಾಗಿದ್ದ ಕೇರಳ ರೈತ ಕೊನೆಗೂ ಭಾರತಕ್ಕೆ ವಾಪಸ್...!

BREAKING: ಇಸ್ರೇಲ್ ನಲ್ಲಿ ನಾಪತ್ತೆಯಾಗಿದ್ದ ಕೇರಳ ರೈತ ಕೊನೆಗೂ ಭಾರತಕ್ಕೆ ವಾಪಸ್…!

ಆಧುನಿಕ ಕೃಷಿ ತಂತ್ರಜ್ಞಾನದ ಅರಿವು ಪಡೆದುಕೊಳ್ಳುವ ಸಲುವಾಗಿ ಸರ್ಕಾರಿ ಪ್ರಾಯೋಜಿತ ಇಸ್ರೇಲ್ ಪ್ರವಾಸಕ್ಕೆ ತೆರಳಿದ್ದ ಕೇರಳ ಮೂಲದ ರೈತರೊಬ್ಬರು ನಾಪತ್ತೆಯಾಗಿದ್ದು, ಇದೀಗ ಭಾರತಕ್ಕೆ ವಾಪಸ್ ಆಗಿದ್ದಾರೆ.

48 ವರ್ಷದ ಬಿಜು ಕುರಿಯನ್ ಇಂದು ಬೆಳಿಗ್ಗೆ 5 ಗಂಟೆ ಸುಮಾರಿಗೆ ಕ್ಯಾಲಿಕಟ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದು, ಈ ಸಂದರ್ಭದಲ್ಲಿ ಕೇರಳ ಸರ್ಕಾರ, ಕೃಷಿ ಸಚಿವ ಹಾಗೂ ತಮ್ಮೊಂದಿಗೆ ಪ್ರವಾಸಕ್ಕೆ ಬಂದಿದ್ದ 27 ಮಂದಿಯ ತಂಡಕ್ಕೆ ಕ್ಷಮೆ ಕೋರಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

27 ಮಂದಿಯ ತಂಡದ ಭಾಗವಾಗಿದ್ದ ಬಿಜು ಕುರಿಯನ್ ಫೆಬ್ರವರಿ 17ರಂದು ನಾಪತ್ತೆಯಾಗಿದ್ದು, ಆತಂಕ ವ್ಯಕ್ತವಾಗಿತ್ತು. ಇಂದು ಈ ಕುರಿತಂತೆ ಸ್ಪಷ್ಟನೆ ನೀಡಿರುವ ಅವರು, ಧಾರ್ಮಿಕ ಸ್ಥಳಗಳಾದ ಜೆರುಸಲೇಮ್ ಹಾಗೂ ಬೆಥ್‌ಲೆಹೆಮ್ ಗೆ ಭೇಟಿ ನೀಡಲು ತಾವು ತಂಡವನ್ನು ಬಿಟ್ಟು ಹೋಗಿದ್ದಾಗಿ ಹೇಳಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular