HomeCrime5 ವರ್ಷದ ಬಾಲಕನಿಗೆ ಕಠಿಣ ಪದಗಳಿಂದ ನಿಂದನೆ; ಕೈಮುರಿಯುವುದಾಗಿ ಬೆದರಿಸಿದ ಶಿಕ್ಷಕಿ

5 ವರ್ಷದ ಬಾಲಕನಿಗೆ ಕಠಿಣ ಪದಗಳಿಂದ ನಿಂದನೆ; ಕೈಮುರಿಯುವುದಾಗಿ ಬೆದರಿಸಿದ ಶಿಕ್ಷಕಿ

ಶಾಕಿಂಗ್ ಘಟನೆಯೊಂದರಲ್ಲಿ ಶಿಕ್ಷಕಿ ಒಬ್ಬರು ಕೇವಲ ಐದು ವರ್ಷದ ಬಾಲಕನಿಗೆ ಥಳಿಸಿದ್ದಲ್ಲದೆ ಅವಾಚ್ಯ ಪದಗಳಿಂದ ನಿಂದಿಸಿದ್ದು, ಜೊತೆಗೆ ಕೈ ಮುರಿವುದಾಗಿಯೂ ಬೆದರಿಕೆ ಹಾಕಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಘಟನೆ ಅಸ್ಸಾಂನ ತೇಜಪುರದಲ್ಲಿ ನಡೆದಿದೆ ಎನ್ನಲಾಗಿದ್ದು, ಅಷ್ಟಕ್ಕೂ 5 ವರ್ಷದ ಬಾಲಕ ಮಾಡಿದ ತಪ್ಪೆಂದರೆ ತನ್ನ ಜಾಗದಿಂದ ಎದ್ದಿದ್ದು. ಇದರಿಂದ ಆಕ್ರೋಶಗೊಂಡ ಶಿಕ್ಷಕಿ ಆತನಿಗೆ ಥಳಿಸಿದ್ದಾರೆ. ಜೊತೆಗೆ ಅವಾಚ್ಯ ಪದಗಳಿಂದ ನಿಂದನೆಯನ್ನೂ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಾನು ವಿಡಿಯೋ ಮಾಡುತ್ತಿದ್ದೇನೆ ಎಂದು ಹೇಳುವ ಶಿಕ್ಷಕಿ, ನೀನು ಜಾಗ ಬಿಟ್ಟು ಕದಲಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಬಾಲಕ ನಾನು ಬರೆದು ಮುಗಿಸಿದ್ದೇನೆ ಎಂದು ಹೇಳಿದ್ದು, ಆಗ ನಿನ್ನ ಕೆನ್ನೆಗೆ ಬಾರಿಸುತ್ತೇನೆ ಎನ್ನುವ ಶಿಕ್ಷಕಿ ಕೈಮುರಿಯುವುದಾಗಿಯೂ ಬೆದರಿಕೆ ಹಾಕಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಂಬಂಧ ಪಟ್ಟ ಶಿಕ್ಷಕಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನೆಟ್ಟಿಗರು ಆಗ್ರಹಿಸುತ್ತಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular