HomeIndiaರೋಚಕವಾಗಿ ಪಂದ್ಯ ಗೆದ್ದ ಅಥ್ಲೀಟ್​: ಓಡುವ ಬದಲು ಹಾರಿ ಬೌಂಡರಿ ಲೈನ್​ ತಲುಪಿದ ಯುವಕ

ರೋಚಕವಾಗಿ ಪಂದ್ಯ ಗೆದ್ದ ಅಥ್ಲೀಟ್​: ಓಡುವ ಬದಲು ಹಾರಿ ಬೌಂಡರಿ ಲೈನ್​ ತಲುಪಿದ ಯುವಕ

ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಹೊಸ ಹೊಸ ಪೋಸ್ಟ್​ಗಳನ್ನು ಶೇರ್​ ಮಾಡುತ್ತಲೇ ಇರುತ್ತಾರೆ. ಇವುಗಳ ಪೈಕಿ ಹಲವು ಸ್ಫೂರ್ತಿದಾಯವಾಗಿರುತ್ತವೆ. ಅಂಥದ್ದೇ ವಿಡಿಯೋ ಒಂದು ಇದೀಗ ವೈರಲ್​ ಆಗಿದೆ.

ಮಹೀಂದ್ರಾ ಅವರು ಓಟದ ಸ್ಪರ್ಧೆಯ 12 ಸೆಕೆಂಡುಗಳ ವೀಡಿಯೊವನ್ನು ಹಂಚಿಕೊಂಡಿದ್ದು, ಈ ವಿಡಿಯೋ ಬಹಳಷ್ಟು ಹೇಳುವಂತಿದೆ. ತಮ್ಮ 10.3 ಮಿಲಿಯನ್ ಟ್ವಿಟ್ಟರ್ ಅನುಯಾಯಿಗಳೊಂದಿಗೆ ತಮ್ಮ ಬುದ್ಧಿವಂತಿಕೆಯ ಮಾತುಗಳನ್ನು ಈ ವಿಡಿಯೋ ಮೂಲಕ ಆನಂದ್ ಅವರು ಹಂಚಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ವೈರಲ್ ವೀಡಿಯೊ ಕುತೂಹಲವಾಗಿದೆ. ಅತ್ಯಂತ ಅಸಾಂಪ್ರದಾಯಿಕ ರೀತಿಯಲ್ಲಿ ಓಟದ ಸ್ಪರ್ಧೆಯನ್ನು ಯುವಕನೊಬ್ಬ ಗೆದ್ದುಕೊಂಡಿರುವ ವಿಡಿಯೋ ಇದಾಗಿದೆ. ರೇಸ್ ಟ್ರ್ಯಾಕ್‌ನ ಫಿನಿಶಿಂಗ್ ಲೈನ್​ ಬಂದಾಗ ಅಥ್ಲೀಟ್‌ ಒಬ್ಬ ಓಡುವ ಬದಲು ಹಾರಿ ಬೌಂಡರಿ ಲೈನ್​ ಅನ್ನು ತಲುಪಿದ್ದಾರೆ.

ಅಸಂಭವ ಎನ್ನುವ ಈ ವಿಡಿಯೋ ಭಾರಿ ವೈರಲ್ ಆಗಿದ್ದು ಎಲ್ಲರ ಹುಬ್ಬೇರಿಸುತ್ತಿದೆ. ಗುರಿ ತಲುಪಲು ಕೊನೆ ಕ್ಷಣದವರೆಗೂ ಹೋರಾಟ ನಡೆಸಿ ಎಂಬ ಸಂದೇಶವನ್ನು ಆನಂದ್​ ಮಹೀಂದ್ರಾ ಸಾರಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular