HomeCrimeಗೆಳೆಯನೊಂದಿಗೆ ಓಡಿಹೋಗಿ ಮದುವೆಯಾಗಲು ನಿರ್ಧರಿಸಿದ ತಾಯಿ; ಅಡ್ಡಿಯಾದ ಮಗನನ್ನೇ ಮುಗಿಸಿದ ಪಾಪಿ

ಗೆಳೆಯನೊಂದಿಗೆ ಓಡಿಹೋಗಿ ಮದುವೆಯಾಗಲು ನಿರ್ಧರಿಸಿದ ತಾಯಿ; ಅಡ್ಡಿಯಾದ ಮಗನನ್ನೇ ಮುಗಿಸಿದ ಪಾಪಿ

ಅಮಾನವೀಯ ಘಟನೆಯೊಂದರಲ್ಲಿ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣದಲ್ಲಿ ತನ್ನ 4 ವರ್ಷದ ಮಗನನ್ನು ತಾಯಿ ತನ್ನ ಗೆಳೆಯನ ಸಹಾಯದಿಂದ ಕೊಂದು ಹಾಕಿದ್ದಾಳೆ.

ಮಗುವನ್ನು ಮಹಿಳೆಯ ಗೆಳೆಯ ಸ್ವೀಕರಿಸಲು ನಿರಾಕರಿಸಿದ ನಂತರ ಆಕೆ ತನ್ನ ಗೆಳೆಯನ ಸಹಾಯದಿಂದ ಕೊಂದಿದ್ದಾಳೆ.

ಮಹಿಳೆ ಮಫುಜಾ ಪಿಯಾಡೈ ಗೆಳೆಯನೊಂದಿಗೆ ಮದುವೆಯಾಗಲೆಂದು ಓಡಿಹೋಗಲು ನಿರ್ಧರಿಸಿದಾಗ ತಮ್ಮೊಂದಿಗೆ ಮಗುವನ್ನು ಕರೆದುಕೊಂಡು ಹೋಗುವುದು ಬೇಡ ಎಂದು ಆತ ಹೇಳಿದ್ದಾನೆ. ಮಗುವನ್ನು ಇಬ್ಬರೂ ಸೇರಿ ಬರ್ಬರವಾಗಿ ಹೊಡೆದು ಕೊಂದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದಕ್ಷಿಣ 24 ಪರಗಣದ ಕುಲ್ತಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಕುಂದಖಾಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕುಲ್ತಾಳಿಯ ಗಾಜಿರ್ ಹತ್ ನಿವಾಸಿ ಅಬ್ದುಲ್ ಹೊಸೈನ್ ಶೇಖ್ (31) ಎಂಬಾತನೊಂದಿಗೆ ಮಫುಜಾ ಪಿಯಾಡೈ ಕಳೆದ ವರ್ಷದಿಂದ ವಿವಾಹೇತರ ಸಂಬಂಧ ಹೊಂದಿದ್ದಳು. ಪಿಯಾಡೈ ಅವರ ಪತಿ ತೋಬ್ ಅಲಿ ಪಿಯಾಡೈ  ಕೆಲಸದ ನಿಮಿತ್ತ ಕೋಲ್ಕತ್ತಾಗೆ ತೆರಳಿದ್ದರು. ಈ ವೇಳೆಗೆ ಮಹಿಳೆ ಮತ್ತು ಆಕೆಯ ಗೆಳೆಯ ಒಂದೆರಡು ಬಾರಿ ಭೇಟಿಯಾಗಿದ್ದರು.

ಮಂಗಳವಾರ ಮಫುಜಾ ಮತ್ತು ಅಬ್ದುಲ್ ಮಗುವನ್ನು ಬಿಟ್ಟು ಓಡಿಹೋಗಿ ಮದುವೆಯಾಗಲು ಯೋಜಿಸಿದ್ದರು. ಆದರೆ, ಮಗುವನ್ನು ಕರೆದುಕೊಂಡು ಹೋಗಲು ಅಬ್ದುಲ್ ನಿರಾಕರಿಸಿದ್ದ. ಹಾಗಾಗಿ ಇಬ್ಬರೂ ಮಗುವನ್ನ ಬರ್ಬರವಾಗಿ ಹೊಡೆದು ಸಾಯಿಸಿದ್ದಾರೆ ಎಂದು ವರದಿಯಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular