HomeKarnatakaBIG NEWS: ಜೆ.ಪಿ. ನಡ್ಡಾ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು; ಇದೆಲ್ಲ ಬಿಜೆಪಿಯ ಸಿದ್ಧಾಂತವೇ.....? ಎಂದು ಪ್ರಶ್ನೆ

BIG NEWS: ಜೆ.ಪಿ. ನಡ್ಡಾ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು; ಇದೆಲ್ಲ ಬಿಜೆಪಿಯ ಸಿದ್ಧಾಂತವೇ…..? ಎಂದು ಪ್ರಶ್ನೆ

ಚಿತ್ರದುರ್ಗ: ಕಾಂಗ್ರೆಸ್ ಗೆ ಸಿದ್ಧಾಂತಗಳಿಲ್ಲ ಎಂಬ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸಾಲು ಸಾಲು ಪ್ರಶ್ನೆಗಳ ಮೂಲಕ ತಿರುಗೇಟು ನೀಡಿದ್ದಾರೆ.

ಚಿತ್ರದುರ್ಗದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಅಬ್ಬಕ್ಕ V/S ಟಿಪ್ಪು ಚರ್ಚೆ ಆಗಲಿದೆ ಎಂದು ಅಮಿತ್ ಶಾ ಹೇಳಿದ್ದು ಸಿದ್ಧಾಂತವೇ? ಗಾಂಧಿ V/S ಸಾವರ್ಕರ್ ಎಂದು ಹೇಳಿರುವುದು ಸಿದ್ಧಾಂತವೇ? ಸಿದ್ದರಾಮಯ್ಯ ಅವರನ್ನು ಮುಗಿಸಿ ಎಂದು ಹೇಳಿರುವುದು ಸಿದ್ಧಾಂತವೇ? ಬಿಜೆಪಿಯವರಿಗೆ ಯಾವ ಸಿದ್ಧಾಂತವಿದೆ? ಎಂದು ಪ್ರಶ್ನಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಳೀನ್ ಕುಮಾರ್ ಕಟೀಲ್ ಅವರಿಗೆ ರಾಜಕೀಯ ಜ್ಞಾನ ಇಲ್ಲ ಎಂದು ಹೇಳುತ್ತಿದ್ದೆ. ಆದರೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರಿಗೂ ರಾಜಕೀಯ ಜ್ಞಾನ ಇಲ್ಲ. ಪ್ರಧಾನಿ ಮೋದಿ, ನಡ್ಡಾ, ಅಮಿತ್ ಶಾ 100 ಬಾರಿ ರಾಜ್ಯಕ್ಕೆ ಬಂದರೂ ಯಾವುದೇ ಪ್ರಯೋಜನ ಆಗಲ್ಲ. ರಾಜ್ಯದ ಜನರು ಬಿಜೆಪಿ ಸೋಲಿಸಲು ತೀರ್ಮಾನಿಸಿದ್ದಾರೆ ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

Most Popular