ಐಪಿಎಸ್ ಅಧಿಕಾರಿ ಡಿ. ರೂಪಾ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ತಮ್ಮ ಹೇಳಿಕೆಗಳ ಕಾರಣಕ್ಕೆ ಈಗ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದು, ಈ ಇಬ್ಬರೂ ಅಧಿಕಾರಿಗಳು ಪರಸ್ಪರ ಆರೋಪ – ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ.
ಇದರ ಮಧ್ಯೆ ತಮ್ಮಿಬ್ಬರ ಜಗಳದ ನಡುವೆ ಐಎಎಸ್ ಅಧಿಕಾರಿ ದಿವಂಗತ ಡಿ.ಕೆ. ರವಿ ಅವರ ಹೆಸರನ್ನು ಈ ಇಬ್ಬರು ಅಧಿಕಾರಿಗಳು ತಂದಿದ್ದು, ಜೊತೆಗೆ ಡಿ.ಕೆ. ರವಿ ಅವರ ಪತ್ನಿ ಕುಸುಮ ಅವರು ಸಹ ಪ್ರತಿಕ್ರಿಯಿಸಿ, ನಾನು ಈ ಹಿಂದೆ ಅನುಭವಿಸಿದ ನೋವು, ಕಷ್ಟ ಯಾವ ಹೆಣ್ಣಿಗೂ ಬರಬಾರದು. ಕರ್ಮ ಯಾರನ್ನೂ ಬಿಡುವುದಿಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದರು.
ಇದೀಗ ಈ ವಿಚಾರಗಳ ಕುರಿತಂತೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿರುವ ದಿವಂಗತ ಡಿ.ಕೆ. ರವಿ ಅವರ ತಾಯಿ ಗೌರಮ್ಮ, ನೀವಿಬ್ಬರು ಏನಾದರೂ ಕಿತ್ತಾಡಿಕೊಳ್ಳಿ. ಆದರೆ ಮಧ್ಯದಲ್ಲಿ ನನ್ನ ಮಗನ ಹೆಸರನ್ನು ಎಳೆದು ತರಬೇಡಿ ಎಂದು ತಾಕೀತು ಮಾಡಿದ್ದಾರೆ.
ಮಗ ತೀರಿಕೊಂಡ ಈ ಎಂಟು ವರ್ಷಗಳಲ್ಲಿ ನನ್ನನ್ನು ನೋಡಲು ಯಾರೂ ಬಂದಿಲ್ಲ. ರವಿಯನ್ನು ಸಾಕಿ ಬೆಳೆಸಿದ್ದು ನಾನು. ಕುಸುಮ ಕೇವಲ ಐದು ವರ್ಷ ಕಾಲ ಸಂಸಾರ ಮಾಡಿದ್ದಾರೆ ಎಂದು ಹೇಳಿದ್ದಾರೆ.