HomeKarnatakaBIG NEWS: ಒಂದು ಹಿಂದೂ ಹುಡುಗಿ ಮುಸ್ಲಿಂ ಕಡೆಗೆ ಹೋದರೆ 10 ಮುಸ್ಲಿಂ ಹೆಣ್ಣುಮಕ್ಕಳನ್ನು ಹಾರಿಸಿಕೊಂಡು...

BIG NEWS: ಒಂದು ಹಿಂದೂ ಹುಡುಗಿ ಮುಸ್ಲಿಂ ಕಡೆಗೆ ಹೋದರೆ 10 ಮುಸ್ಲಿಂ ಹೆಣ್ಣುಮಕ್ಕಳನ್ನು ಹಾರಿಸಿಕೊಂಡು ಹೋಗಿ ಎಂದ ಪ್ರಮೋದ್ ಮುತಾಲಿಕ್

ಬಾಗಲಕೋಟೆ: ಹಿಂದೂ ಹೆಣ್ಣುಮಕ್ಕಳನ್ನು ಲವ್ ಜಿಹಾದ್ ನಲ್ಲಿ ತೊಡಗಿಸುತ್ತಿದ್ದಾರೆ. ದೇಶಾದ್ಯಂತ ಹಿಂದೂ ಹೆಣ್ಣುಮಕ್ಕಳನ್ನು ಪ್ರೀತಿ, ಪ್ರೇಮ ಎಂದು ಮೋಸ ಮಾಡಿ ಬಳಿಕ ಅವರು ಬುರ್ಖಾ ಹಾಕುವಂತೆ ಮಾಡಲಾಗುತ್ತಿದೆ. ಇದಕ್ಕೆ ನಮ್ಮ ಬಳಿಯೂ ಅಸ್ತ್ರವಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಾಗ್ದಾಳಿ ನಡೆಸಿದ್ದಾರೆ.

ಬಾಗಲಕೋಟೆಯಲ್ಲಿ ಮಾತನಾಡಿದ ಪ್ರಮೋದ್ ಮುತಾಲಿಕ್, ಒಂದು ಹಿಂದೂ ಹುಡುಗಿ ಮುಸ್ಲಿಂ ಕಡೆಗೆ ಹೋದರೆ 10 ಮುಸ್ಲಿಂ ಹೆಣ್ಣುಮಕ್ಕಳನ್ನು ಹಾರಿಸಿಕೊಂಡು ಹೋಗಿ. ನಿಮಗೆ ರಕ್ಷಣೆ, ಉದ್ಯೋಗ ಎಲ್ಲ ಜವಾಬ್ದಾರಿ ನಮ್ಮದು ಎಂದು ಹೇಳುವ ಮೂಲಕ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ.

ಇದೇ ವೇಳೆ ಪ್ರತಿಯೊಬ್ಬ ಹಿಂದೂ, ಮನೆಯಲ್ಲಿಯೂ ತಲ್ವಾರ್ ಇಟ್ಟುಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಯುಧ ಪೂಜೆ ಮಾಡುವುದು ಎಂದರೆ ಕೇವಲ ಪೆನ್ನು, ಪುಸ್ತಕ, ಚಾಕು, ಚೂರಿ ಪೂಜಿಸುವುದಲ್ಲ, ಖಡ್ಗ, ತಲ್ವಾರ್ ಪೂಜಿಸಬೇಕು. ಗೋರಕ್ಷಣೆ, ನಮ್ಮ ಅಕ್ಕತಂಗಿಯರ ರಕ್ಷಣೆಗಾಗಿ, ರಾಷ್ಟ್ರ ರಕ್ಷಣೆಗಾಗಿ, ಮಠ ಮಂದಿರ ರಕ್ಷಣೆಗಾಗಿ ತಲ್ವಾರ್ ಇಟ್ಟುಕೊಂಡಿರಬೇಕು ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular