ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಶಾಂತ್ ನಂದಾ ಅವರು ಟ್ವಿಟರ್‌ನಲ್ಲಿ ಆಗಿದ್ದಾಂಗೆ ಕೆಲವು ಆಸಕ್ತಿದಾಯಕ ವೀಡಿಯೊವನ್ನು ಹಂಚಿಕೊಳ್ಳುತ್ತಿರುತ್ತಾರೆ. ಇವರು ಶೇರ್ ಮಾಡುವ ವಿಡಿಯೋಗಳು ಹೆಚ್ಚಿನದ್ದಾಗಿ ವನ್ಯಮೃಗಗಳಿಗೆ ಸಂಬಂಧಿಸಿದ್ದಾಗಿರುತ್ತವೆ. ಈಗ ಅಂಥದ್ದೇ ಒಂದು ವಿಡಿಯೋ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಹುಲಿ ಪ್ರಾಬಲ್ಯದ ಪ್ರದೇಶಗಳಲ್ಲಿ ಚಿರತೆ ಹೇಗೆ ಬದುಕುಳಿಯುತ್ತದೆ, ಅದು ತನ್ನನ್ನು ಹೇಗೆ ರಕ್ಷಣೆ ಮಾಡಿಕೊಳ್ಳುತ್ತದೆ ಎಂಬುದನ್ನು ನೋಡಬಹುದು. ಚಿಕ್ಕ ವಿಡಿಯೋದಲ್ಲಿ ಇದಕ್ಕೆ ಸ್ಪಷ್ಟವಾದ ಉತ್ತರ ಸಿಗುತ್ತದೆ.
ಇದು 30 ಸೆಕೆಂಡುಗಳ ವಿಡಿಯೋವಾಗಿದೆ. ಈ ವಿಡಿಯೋದಲ್ಲಿ ಹುಲಿ, ಚಿರತೆಯ ಮೇಲೆ ದಾಳಿ ಮಾಡಲು ಸಿದ್ಧವಾಗುತ್ತಿರುವುದನ್ನು ಕಾಣಬಹುದು. ಅದು ಚಿರತೆಯ ಕಡೆಗೆ ಧಾವಿಸಿ ಬಂದಾಗ ಚಿರತೆ ಅಲ್ಲಿರುವ ಮರವನ್ನು ವೇಗದಲ್ಲಿ ಹತ್ತುತ್ತದೆ.
ಆದರೆ ಹುಲಿಗೆ ಅದರಷ್ಟು ವೇಗದಲ್ಲಿ ಹತ್ತಲು ಸಾಧ್ಯವಾಗದೇ ಅರ್ಧಕ್ಕೇ ವಾಪಸಾಗುತ್ತದೆ. ಈ ಕುರಿತು ತಿಳಿಸಿರುವ ಸುಸಂತಾ ನಂದಾ ಅವರು, ಹುಲಿಯು ಪ್ರಾಯದಲ್ಲಿ ವೇಗವಾಗಿ ಮರವನ್ನು ಹತ್ತಬಲ್ಲುವು. ಆದರೆ ಅವುಗಳಿಗೆ ಸ್ವಲ್ಪ ವಯಸ್ಸಾದರೆ ದೇಹದ ತೂಕ ಹೆಚ್ಚಾಗಿ ಮರ ಏರುವುದು ಕಷ್ಟವಾಗುತ್ತದೆ. ಇದರಿಂದ ಚಿರತೆಗಳು ಸುಲಭವಾಗಿ ರಕ್ಷಿಸಿಕೊಳ್ಳುತ್ತವೆ ಎಂದಿದ್ದಾರೆ.
That is how leopard survives in a tiger dominated landscape😊
Tigers can easily climb trees,with their sharp and retractable claws providing a powerful grip to hold the tree trunk and climb up. But as they grow old their body weight prevents them to do so.
Stay slim to survive🙏 pic.twitter.com/uePgSwIJcj— Susanta Nanda IFS (Retd) (@susantananda3) February 14, 2023
Amazing
— WildLense® Eco Foundation 🇮🇳 (@WildLense_India) February 14, 2023
https://twitter.com/anandkalyanji5/status/1625441599911264256?ref_src=twsrc%5Etfw%7Ctwcamp%5Etweetembed%7Ctwter

