ನಿಮ್ಮ ಗೆಳತಿ ಅಥವಾ ಹೆಂಡತಿಗೆ ವಿಶೇಷ ಉಡುಗೊರೆ ಕೊಟ್ಟು ಪ್ರೇಮಿಗಳ ದಿನದ ವಿಷ್ ಮಾಡಲು ಹಾತೊರೆಯುತ್ತಿದ್ದ ಸಂದರ್ಭದಲ್ಲಿ ಎಡವಟ್ಟು ಸಂಭವಿಸಿ ಉಡುಗೊರೆಯೆಲ್ಲವೂ ಮಣ್ಣುಪಾಲಾದರೆ ಹೇಗಾಗುತ್ತದೆ ? ಊಹಿಸಿಕೊಳ್ಳಲೂ ಕಷ್ಟ ಅಲ್ಲವೆ ? ಅಂಥದ್ದೇ ವಿಡಿಯೋ ಒಂದು ಇದೀಗ ವೈರಲ್ ಆಗಿದೆ.
ಈ ವಿಡಿಯೋವನ್ನು ಬ್ಯುಟೆಂಗೆಬೀಡೆನ್ ಅವರ ಟ್ವಿಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಲಾಗಿದೆ ಮತ್ತು 1 ಲಕ್ಷಕ್ಕೂ ಹೆಚ್ಚು ಮಂದಿ ಇದನ್ನು ನೋಡಿದ್ದಾರೆ.
ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಕೈಯಲ್ಲಿ ಹೂಗುಚ್ಛ, ಚಾಕೊಲೇಟ್‌ಗಳು ಮತ್ತು ಬಲೂನ್‌ನೊಂದಿಗೆ ಕಟ್ಟಡದೊಳಗೆ ಪ್ರವೇಶಿಸುತ್ತಾನೆ. ಅವನು ಒಳಗೆ ಹೋಗಲು ಗಾಜಿನ ಬಾಗಿಲನ್ನು ತೆರೆದಾಗ ಬಲೂನಿನ ದಾರ ಹೊರಗೆ ಉಳಿದಿರುವುದು ಕಾಣಿಸುತ್ತದೆ. ದಾರವನ್ನು ಎಳೆಯುವುದಕ್ಕಾಗಿ ಗಾಜಿನ ಬಾಗಿಲು ತೆರೆಯಲು ಮುಂದಾದಾಗ ಕೈಯಲ್ಲಿರುವ ಹೂಗುಚ್ಛ ಬೀಳುತ್ತದೆ.
ಹೂಗುಚ್ಛವನ್ನು ಬ್ಯಾಲೆನ್ಸ್ ಮಾಡಲು ಹೋದಾಗ ಅವನು ತಂದ ಚಾಕಲೇಟ್, ಕೇಕ್ ಎಲ್ಲವೂ ಕೆಳಕ್ಕೆ ಬಿದ್ದು ಚೆಲ್ಲಾಪಿಲ್ಲಿಯಾಗುತ್ತದೆ. ಇದನ್ನು ನೋಡಿದ ವ್ಯಕ್ತಿಗೆ ಏನು ಮಾಡಬೇಕು ಎಂದು ತಿಳಿಯದೇ ಕಕ್ಕಾಬಿಕ್ಕಿಯಾಗುತ್ತಾನೆ. ಇದನ್ನು ನೋಡಿದ ನೆಟ್ಟಿಗರು ಬಿದ್ದೂ ಬಿದ್ದೂ ನಗುತ್ತಿದ್ದರೆ, ಆ ವ್ಯಕ್ತಿಯ ಸ್ಥಿತಿ ಕಂಡ ಕೆಲವರು ಮರುಕ ವ್ಯಕ್ತಪಡಿಸುತ್ತಿದ್ದಾರೆ.
https://twitter.com/buitengebieden/status/1625358093956575233?ref_src=twsrc%5Etfw%7Ctwcamp%5Etweetembed%7Ctwterm%5E1625358093956575233%7Ctwgr%5Eb33b72d76e8f3c9c94623c1cd6627f38adc9f715%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fthis-is-the-worst-that-can-happen-to-someone-on-valentines-day-internet-feels-sad-for-him-2334617-2023-02-14
I feel bad for laughing, but the thought that came to my mind was how I could see my sweet husband doing this very thing. He's the most sweetest, loving, thoughtful, and clumsy man. I wouldn't trade him for anything.
— Liberty and Laughs (@FreeWitWins) February 14, 2023
Ohhh poor soul 😢 💔
— Saima Umair (@Saimasartlounge) February 14, 2023

