HomeCrimeShocking Video: ವಾಕಿಂಗ್ ಹೊರಟಿದ್ದ ಯುವತಿ ಮೊಬೈಲ್ ಕದಿಯಲು ಆಕೆಯ ಎದೆ ಮೇಲೆ ಹೊಡೆದ ಕಾಮುಕ

Shocking Video: ವಾಕಿಂಗ್ ಹೊರಟಿದ್ದ ಯುವತಿ ಮೊಬೈಲ್ ಕದಿಯಲು ಆಕೆಯ ಎದೆ ಮೇಲೆ ಹೊಡೆದ ಕಾಮುಕ

ಮುಂಜಾನೆ ವಾಕಿಂಗ್ ಮಾಡ್ತಿದ್ದ ಯುವತಿಯಿಂದ ಫೋನ್ ಕದಿಯುವ ಉದ್ದೇಶದಿಂದ ಯುವತಿಯ ಎದೆಗೆ ಹೊಡೆದಿರೋ ಘಟನೆ ಮುಂಬೈನಲ್ಲಿ ವರದಿಯಾಗಿದೆ.

ಪ್ರಕರಣ ಸಂಬಂಧ ಧಾರಾವಿ ಪ್ರದೇಶದ ಇಬ್ಬರು ಯುವಕರನ್ನು ಮುಂಬೈ ಬಾಂದ್ರಾ ಪೊಲೀಸರು ಬಂಧಿಸಿದ್ದಾರೆ. ಬಾಂದ್ರಾದಲ್ಲಿ ಭಾನುವಾರ ಬೆಳಗ್ಗೆ ಯುವತಿ ವಾಕಿಂಗ್‌ಗೆ ಹೊರಟಾಗ ಈ ಘಟನೆ ನಡೆದಿದೆ.

ಘಟನೆ ನಡೆದ ಕೂಡಲೇ ಯುವತಿ ದೂರು ದಾಖಲಿಸಿದ್ದು ಸಿಸಿ ಕ್ಯಾಮೆರಾ ದೃಶ್ಯಾವಳಿ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಿಸಿ ಕ್ಯಾಮೆರಾದ ದೃಶ್ಯಾವಳಿಗಳು ಈಗ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೆಯಾಗುತ್ತಿದ್ದು, ದ್ವಿಚಕ್ರ ವಾಹನ ಸವಾರರು ಯುವತಿ ಹೋಗುತ್ತಿದ್ದ ವಿರುದ್ಧ ದಿಕ್ಕಿನಿಂದ ಬಂದು ಅವಳ ಫೋನ್ ಕದಿಯುವ ಪ್ರಯತ್ನದಲ್ಲಿ ಅವಳ ಎದೆಗೆ ಹೊಡೆಯುವುದನ್ನು ತೋರಿಸುತ್ತದೆ.

ಮೊಬೈಲ್ ಕದಿಯಲು ಸಾಧ್ಯವಾಗದೇ ಅವರಿಬ್ಬರು ಸ್ಥಳದಿಂದ ತೆರಳುವುದನ್ನು ದೃಶ್ಯದಲ್ಲಿ ನೋಡಬಹುದು.

For Latest News Updates, Join Our Whatsapp Community🚩
RELATED ARTICLES

Most Popular