HomeKarnatakaBIG NEWS: ಅರಸಿಕೆರೆ ಹಾಲಿ ಶಾಸಕರಿಂದ ಹಂತಹಂತವಾಗಿ ಜೆಡಿಎಸ್ ಮುಗಿಸಲು ಯತ್ನ; ಶಿವಲಿಂಗೇಗೌಡರ ವಿರುದ್ಧ ಹೆಚ್.ಡಿ....

BIG NEWS: ಅರಸಿಕೆರೆ ಹಾಲಿ ಶಾಸಕರಿಂದ ಹಂತಹಂತವಾಗಿ ಜೆಡಿಎಸ್ ಮುಗಿಸಲು ಯತ್ನ; ಶಿವಲಿಂಗೇಗೌಡರ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ

ಅರಸಿಕೆರೆ: ಜೆಡಿಎಸ್ ಶಾಸಕ ಶಿವಲಿಂಗೇಗೌಡರ ವಿರುದ್ಧ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದು, ಜೆಡಿಎಸ್ ಮುಗಿಸಲು ಯತ್ನಿಸಿದ್ದರು ಎಂದು ವಾಗ್ದಾಳಿ ನಡೆಸಿದ್ದಾರೆ.

ಅರಸಿಕೆರೆಯಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಕುಮಾರಸ್ವಾಮಿ, ಕ್ಷೇತ್ರದ ಹಾಲಿ ಶಾಸಕರ ವಿರುದ್ಧ ಗುಡುಗಿದ್ದಾರೆ. ಹಾಲಿ ಶಾಸಕ ಶಿವಲಿಂಗೇಗೌಡರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ. ಹಂತ ಹಂತವಾಗಿ ಜೆಡಿಎಸ್ ಮುಗಿಸಲು ಯತ್ನಿಸಿದ್ದಾರೆ. ಇಂದು ಸಮಾವೇಶಕ್ಕೆ ಹೋಗದಂತೆ ಜನರಿಗೆ ಹಣ ಹಂಚಿದ್ದಾರೆ. ಶಾಸಕರು ಹಣದ ಅಮಿಷವೊಡ್ದಿದರೂ ಇಷ್ಟು ಪ್ರಮಾಣದಲ್ಲಿ ಜನರು ಬಂದಿದ್ದೀರಿ ಎಂದು ಹೇಳಿದರು.

ಅರಸಿಕೆರೆ ಕ್ಷೇತ್ರಕ್ಕೆ ಸಾಕಷ್ಟು ಅನುದಾನ, ಯೋಜನೆಗಳನ್ನು ನೀಡಿದ್ದೆವು. ಜೆಡಿಎಸ್ ನಿಂದಲೇ ಗೆದ್ದ ಶಿವಲಿಂಗೇಗೌಡರು ನಮ್ಮ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನಿಮ್ಮ ಮುಂದಿನ ನಿರ್ಧಾರವನ್ನು ತಿಳಿಸಿ ಎಂದು ಹೆಚ್.ಡಿ. ರೇವಣ್ಣ ಸಾಕಷ್ಟು ಬಾರಿ ಅವಕಾಶ ನೀಡಿದ್ದರು. ಆದರೂ ಯಾವುದೆ ತೀರ್ಮಾನ ಕೈಗೊಂಡಿಲ್ಲ ಎಂದು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular