HomeKarnatakaBIG NEWS: ಮಾರ್ಚ್ 31 ಕ್ಕೆ VISL ಸಂಪೂರ್ಣ ಸ್ಥಗಿತ

BIG NEWS: ಮಾರ್ಚ್ 31 ಕ್ಕೆ VISL ಸಂಪೂರ್ಣ ಸ್ಥಗಿತ

ಕರ್ನಾಟಕದ ಹೆಮ್ಮೆಯ ಕಾರ್ಖಾನೆ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಘಟಕ (ವಿಐಎಸ್ಎಲ್) ಮಾರ್ಚ್ 31ಕ್ಕೆ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ ಎಂದು ತಿಳಿದುಬಂದಿದೆ.

ವಿಐಎಸ್ಎಲ್ ಕಾರ್ಖಾನೆಯನ್ನು ಪುನರಾರಂಭಿಸಬೇಕೆಂದು ಹೋರಾಟ ನಡೆಯುತ್ತಿರುವ ಮಧ್ಯೆಯೂ ಸೈಲ್ ಮುಖ್ಯಸ್ಥರು ಕಾರ್ಖಾನೆ ಅಧಿಕಾರಿಗಳಿಗೆ ಈ ಕುರಿತು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ನವದೆಹಲಿಯ ಕಾರ್ಪೊರೇಟ್ ಕಚೇರಿಯಲ್ಲಿ ಕಾರ್ಯಪಾಲಕ ನಿರ್ದೇಶಕ ಬಿ.ಎಲ್. ಚಾಂದ್ವಾನಿ ಸೇರಿದಂತೆ ಕಾರ್ಖಾನೆಯ ಆಡಳಿತ ಮಂಡಳಿ ಅಧಿಕಾರಿಗಳು ಸಭೆ ನಡೆಸಿದ್ದು, ಈ ಸಂದರ್ಭದಲ್ಲಿ ಯಾವುದೇ ವಿಭಾಗಗಳಲ್ಲಿಯೂ ಉತ್ಪಾದನೆ ಮಾಡುವಂತಿಲ್ಲವೆಂದು ಆದೇಶ ಮಾಡಿದ್ದಾರೆ ಎಂದು ಹೇಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular