HomeKarnatakaBIG NEWS: BJPಯಲ್ಲಿ 8 ಜನ ಡಿಸಿಎಂ ಆಗುವ ಬಗ್ಗೆಯೂ ಚರ್ಚೆಯಾಗಿದೆ; ಅವರು ಯಾರೆಂದೂ ಗೊತ್ತಿದೆ;...

BIG NEWS: BJPಯಲ್ಲಿ 8 ಜನ ಡಿಸಿಎಂ ಆಗುವ ಬಗ್ಗೆಯೂ ಚರ್ಚೆಯಾಗಿದೆ; ಅವರು ಯಾರೆಂದೂ ಗೊತ್ತಿದೆ; ಮತ್ತೊಂದು ಬಾಂಬ್ ಸಿಡಿಸಿದ HDK

ಬೆಂಗಳೂರು: ಪ್ರಹ್ಲಾದ್ ಜೋಶಿ ಸಿಎಂ ಮಾಡಲು ಆರ್ ಎಸ್ ಎಸ್ ಹುನ್ನಾರ ವಿಚಾರವಾಗಿ ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ನಾನು ಪ್ರಹ್ಲಾದ್ ಜೋಶಿ ಅವರ ವಿರೋಧಿಯಲ್ಲ. ಜೋಶಿ ಅವರನ್ನು ಸಿಎಂ ಮಾಡುವುದಾದರೆ ಮೊದಲೇ ಘೋಷಣೆ ಮಾಡಲಿ ಎಂದು ಹೇಳಿದ್ದಾರೆ.

ಚುನಾವಣೆ ಮುಂಚಿತವಾಗಿ ಬಿಜೆಪಿಯವರು ಸಿಎಂ ಅಭ್ಯರ್ಥಿ ಘೋಷಣೆ ಮಾಡಲಿ. ನಾನು ಯಾವುದೇ ಸಮುದಾಯದ ವಿರೋಧಿಯಲ್ಲ. ಮುಖ್ಯಮಂತ್ರಿ ಆಗಲು ಅರ್ಹತೆ ಇರುವವರು ಬ್ರಾಹ್ಮಣರಲ್ಲಿಯೂ ಇದ್ದಾರೆ. ಈಗಾಗಲೇ ಬಿ.ಎಸ್.ಯಡಿಯೂರಪ್ಪ ಅವರನ್ನು ಸೈಡ್ ಲೈನ್ ಮಾಡಲಾಗಿದೆ. ಶೆಟ್ಟರ್ ಅವರನ್ನು ಅಮಿತ್ ಶಾ ಅವರ ಕಾರ್ಯಕ್ರಮದ ವೇದಿಕೆಯಿಂದ ಹೊರಗಿಟ್ಟರು. ಚುನಾವಣೆ ಮುಗಿದ ಮೇಲೆ ಜೋಶಿ ಸಿಎಂ ಆಗ್ತಾರೆ ಎಂಬ ಮಾಹಿತಿ ಇದೆ ಎಂದರು.

ಬಿಜೆಪಿಯಲ್ಲಿ 8 ಜನ ಡಿಸಿಎಂ ಆಗುವ ಬಗ್ಗೆಯೂ ಚರ್ಚೆ ನಡೆದಿದೆ. ಆ 8 ಜನ ಯಾರ್ಯಾರು ಅಂತಾ ಗೊತ್ತಿದೆ. ಅದಕ್ಕೆ ಸ್ವಲ್ಪ ಎಚ್ಚರಿಕೆಯಿಂದ ಇರಿ ಅಂತಾ ಹೇಳಿದ್ದೇನೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular