HomeIndiaಮೋದಿಯವರ 'ಪರೀಕ್ಷಾ ಪೇ ಚರ್ಚಾ' ದ 5 ಆವೃತ್ತಿಗಳಿಗೆ 28 ಕೋಟಿ ರೂಪಾಯಿ ವೆಚ್ಚ

ಮೋದಿಯವರ ‘ಪರೀಕ್ಷಾ ಪೇ ಚರ್ಚಾ’ ದ 5 ಆವೃತ್ತಿಗಳಿಗೆ 28 ಕೋಟಿ ರೂಪಾಯಿ ವೆಚ್ಚ

ಪರೀಕ್ಷೆ ಕುರಿತಂತೆ ವಿದ್ಯಾರ್ಥಿಗಳಲ್ಲಿರುವ ಭಯ, ಗೊಂದಲ ನಿವಾರಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿಯವರು ಪ್ರತಿ ವರ್ಷವೂ ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮ ನಡೆಸುತ್ತಿದ್ದಾರೆ. 2018 ರಿಂದ ಇದು ಆರಂಭವಾಗಿದ್ದು, ಕೆಲ ದಿನಗಳ ಹಿಂದಷ್ಟೇ ಮತ್ತೊಂದು ಆವೃತ್ತಿ ನಡೆದಿತ್ತು.

‘ಪರೀಕ್ಷಾ ಪೇ ಚರ್ಚಾ’ ಸಂದರ್ಭದಲ್ಲಿ ನರೇಂದ್ರ ಮೋದಿಯವರು ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರೊಂದಿಗೆ ಹಲವು ವಿಷಯಗಳ ಚರ್ಚೆ ನಡೆಸುತ್ತಿದ್ದು, ಇದೊಂದು ಜನಪ್ರಿಯ ಕಾರ್ಯಕ್ರಮವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದರ ಮಧ್ಯೆ ‘ಪರೀಕ್ಷಾ ಪೇ ಚರ್ಚಾ’ ದ ಮೊದಲ ಐದು ಆವೃತ್ತಿಗಳಿಗೆ 28 ಕೋಟಿ ರೂಪಾಯಿ ವೆಚ್ಚವಾಗಿದೆ ಎಂದು ಲೋಕಸಭೆಯಲ್ಲಿ ಮಾಹಿತಿ ನೀಡಲಾಗಿದೆ. 2018ರಲ್ಲಿ ನಡೆದ ಮೊದಲ ಆವೃತ್ತಿಗೆ 3.67 ಕೋಟಿ ರೂಪಾಯಿ, 2019 ರಲ್ಲಿ 4.93 ಕೋಟಿ ರೂಪಾಯಿ, 2020 ರಲ್ಲಿ 5.69 ಕೋಟಿ ರೂಪಾಯಿ, 2021 ರಲ್ಲಿ 6 ಕೋಟಿ ರೂಪಾಯಿ ಹಾಗೂ 2022 ರಲ್ಲಿ 8.67 ಕೋಟಿ ರೂಪಾಯಿ ವೆಚ್ಚವಾಗ ಮಾಡಲಾಗಿದೆ ಎಂದು ಕೇಂದ್ರ ಶಿಕ್ಷಣ ಇಲಾಖೆ ತಿಳಿಸಿದೆ.

For Latest News Updates, Join Our Whatsapp Community🚩
RELATED ARTICLES

Most Popular